ರೋಗನಿರೋಧಕ ಕೋಶಗಳಿಂದ ಉತ್ಪತ್ತಿಯಾದ ಆ್ಯಂಟಿಬಾಡಿಗಳು ಕೋವಿಡ್ ಲಸಿಕೆಗಳನ್ನು ಸ್ವೀಕರಿಸಿದ ಕನಿಷ್ಟ ಆರು ತಿಂಗಳ ಬಳಿಕ ಹೆಚ್ಚು ಗುಣಮಟ್ಟವನ್ನು ಹೊಂದಿರುತ್ತದೆ ಎಂದು ಅಧ್ಯಯನವು ಹೇಳಿದೆ.
ಅಮೆರಿಕದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನ ಸಂಶೋಧಕರು ಫೈಜರ್ ಲಸಿಕೆಗಳನ್ನು ಸ್ವೀಕರಿಸಿದವರ ಮೇಲೆ ಈ ಅಧ್ಯಯನವನ್ನು ನಡೆಸಿದ್ದಾರೆ. ಈ ಅಧ್ಯಯನದ ವರದಿಯನ್ನು ನೇಚರ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಜರ್ನಲ್ ನೇಚರ್ನಲ್ಲಿ ಮಂಗಳವಾರ ಪ್ರಕಟಿಸಲಾದ ಅಧ್ಯಯನದಲ್ಲಿ ಲಸಿಕೆಯನ್ನು ಸ್ವೀಕರಿಸಿದ ಬಳಿಕ ತಿಂಗಳುಗಳಲ್ಲಿ ಆ್ಯಂಟಿಬಾಡಿಗಳು ಕಡಿಮೆಯಾಗುವುದು ಆ್ಯಂಟಿಬಾಡಿಗಳ ಪ್ರತಿಕ್ರಿಯೆ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಆದರೆ ಈ ಕಡಿಮೆ ಗುಣಮಟ್ಟದ ಪ್ರತಿಕಾಯಗಳು ರೋಗದ ವಿರುದ್ಧ ಸ್ವಲ್ಪ ಮಟ್ಟಿಗಿನ ರಕ್ಷಣೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಕೊರೊನಾ ಲಸಿಕೆಯ ಎರಡು ಡೋಸ್ಗಳನ್ನು ಪಡೆದ ಜನರು ಹೆಚ್ಚಿನ ಆ್ಯಂಟಿಬಾಡಿಗಳನ್ನು ಹೊಂದಿರುತ್ತಾರೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಹಿರಿಯ ಲೇಖಕ ಅಲಿ ಎಲ್ಲೆಬೆಡಿ ಹೇಳಿದ್ದಾರೆ. ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ ಕೆಲವು ತಿಂಗಳುಗಳ ಬಳಿಕ ಜನರಲ್ಲಿ ಆ್ಯಂಟಿಬಾಡಿಗಳ ಗುಣಮಟ್ಟವು ಸಕ್ರಿಯವಾಗಿ ಸುಧಾರಿಸಿದೆ ಎಂದು ಎಲ್ಲೆಬೇಡಿ ಹೇಳಿದ್ದಾರೆ.