alex Certify ಕೊರೊನಾ ಲಸಿಕೆ ಬಳಿಕ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ; ಏಮ್ಸ್ ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಬಳಿಕ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ; ಏಮ್ಸ್ ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಕೊರೋನಾ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಈ ಮಧ್ಯೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಡೆಸಿದ ಸಂಶೋಧನೆಯ ಫಲಿತಾಂಶ ಆಘಾತಕಾರಿಯಾಗಿದೆ. ಕೊರೋನಾ ಲಸಿಕೆ, ಸುಮಾರು 6 ಪ್ರತಿಶತದಷ್ಟು ಮಹಿಳೆಯರ ಋತುಚಕ್ರದ ಮೇಲೆ ಪರಿಣಾಮ ಬೀರಿದೆ ಎಂಬುದು ಈ ಸಂಶೋಧನೆಯಲ್ಲಿ ದೃಢಪಟ್ಟಿದೆ. ಈ ಸಂಶೋಧನೆಯನ್ನು ದೇಶದ ಆರು ಎಐಐಎಂಎಸ್‌ಗಳಲ್ಲಿ ನಡೆಸಲಾಗಿದ್ದು, ಇದರಲ್ಲಿ 5709 ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ.

ಸಂಶೋಧನೆಯ ಪ್ರಕಾರ  ಈ ಪೈಕಿ ಶೇ.78.2 ಮಹಿಳೆಯರು ಎರಡು ಡೋಸ್ ಕೋವಿಶೀಲ್ಡ್ ಅನ್ನು ಪಡೆದಿದ್ದಾರೆ ಮತ್ತು ಶೇ.21.8 ಮಹಿಳೆಯರು ಎರಡು ಡೋಸ್ ಕೋವಾಕ್ಸಿನ್ ಅನ್ನು ಪಡೆದಿದ್ದಾರೆ. 28 ರಿಂದ 38 ದಿನಗಳ ಮಧ್ಯಂತರದಲ್ಲಿ ಋತುಚಕ್ರ ಬರುವಂತಹ  ಮಹಿಳೆಯರನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ.

ಋತುಚಕ್ರದಲ್ಲಿ ಯಾವ ಬದಲಾವಣೆಗಳು ಸಂಭವಿಸಿವೆ ?

ಅಧ್ಯಯನದ ಪ್ರಕಾರ ವ್ಯಾಕ್ಸಿನೇಷನ್ ನಂತರ 333 ಮಹಿಳೆಯರಲ್ಲಿ ಋತುಚಕ್ರವು ಅನಿಯಮಿತವಾಗಿದೆ. 301 ಮಹಿಳೆಯರಲ್ಲಿ ರಕ್ತಸ್ರಾವದ ಪ್ರಮಾಣದಲ್ಲಿ ಬದಲಾವಣೆ ಕಂಡುಬಂದಿದೆ. ಅದೇ ಸಮಯದಲ್ಲಿ  ದೌರ್ಬಲ್ಯ, ತಲೆನೋವು, ದೇಹದ ನೋವು ಮುಂತಾದ ಹೊಸ ಲಕ್ಷಣಗಳು 721 ಮಹಿಳೆಯರಲ್ಲಿ ಕಾಣಿಸಿಕೊಂಡಿವೆ. ರಕ್ತಸ್ರಾವದ ಪ್ರಮಾಣವು ಸುಮಾರು 51 ಪ್ರತಿಶತದಷ್ಟು ಹೆಚ್ಚಾಗಿದೆ.

ಆದರೆ ಈ ಬದಲಾವಣೆ ತಾತ್ಕಾಲಿಕ ಎನ್ನುತ್ತಾರೆ ವೈದ್ಯರು. ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳನ್ನು ಅಧ್ಯಯನ ಮಾಡಿರುವ ವೈದ್ಯರ ಪ್ರಕಾರ ಲಸಿಕೆ ಪಡೆದ ಸ್ವಲ್ಪ ಸಮಯದ ನಂತರ ಋತುಚಕ್ರವು ಸಾಮಾನ್ಯವಾಗುತ್ತದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...