alex Certify ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಪಡೆಯೋದು ಸುರಕ್ಷಿತವೇ ? ಸಂಶೋಧನೆಯಲ್ಲಿ ಬಹಿರಂಗವಾಗಿದೆ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಪಡೆಯೋದು ಸುರಕ್ಷಿತವೇ ? ಸಂಶೋಧನೆಯಲ್ಲಿ ಬಹಿರಂಗವಾಗಿದೆ ಸತ್ಯ

ಕೊರೊನಾ ವೈರಸ್‌ನ ಹೊಸ ರೂಪಾಂತರದ ಎಂಟ್ರಿಯಾದ ಬಳಿಕ ಜನರು ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ಬೂಸ್ಟರ್‌ ಡೋಸ್‌ ಪಡೆಯುವುದು ಸುರಕ್ಷಿತವೇ ? ಇದರಿಂದ ಅಡ್ಡ ಪರಿಣಾಮಗಳೇನೂ ಇಲ್ಲವೇ ಎಂಬ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಸಂಶೋಧನೆಯೊಂದು ನಡೆದಿದ್ದು, ಅನೇಕ ಸಂಗತಿಗಳು ಪತ್ತೆಯಾಗಿವೆ.

ಟೆಲ್ ಅವಿವ್ ವಿಶ್ವವಿದ್ಯಾಲಯ, ಇಸ್ರೇಲ್‌ನಲ್ಲಿ ಸುಮಾರು 5 ಸಾವಿರ ಜನರನ್ನು ಬಳಸಿಕೊಂಡು ಸಂಶೋಧನೆ ನಡೆಸಿದೆ. ಅಧ್ಯಯನದ ಸಮಯದಲ್ಲಿ ಎಲ್ಲರಿಗೂ ಸ್ಮಾರ್ಟ್ ವಾಚ್‌ಗಳನ್ನು ಧರಿಸುವಂತೆ ಸೂಚಿಸಲಾಗಿತ್ತು. ಈ ಮೂಲಕ ಡೇಟಾವನ್ನು ಸಂಗ್ರಹಿಸಲಾಗಿದೆ. ಇಸ್ರೇಲ್‌ ವಿವಿ ಅಧ್ಯಯನದ ಪ್ರಕಾರ ಕೋವಿಡ್‌ ಲಸಿಕೆಯ ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ. ಲಸಿಕೆ ಪಡೆದ ನಂತರ ಜನರ ದೇಹದಲ್ಲಿ ಯಾವ ರೀತಿ ಬದಲಾವಣೆಗಳಾಗಿದೆ ಎಂಬ ಬಗ್ಗೆ ಸಂಶೋಧನೆ ವೇಳೆ ನಿಗಾ ಇಡಲಾಗಿತ್ತು. ಸಂಶೋಧನೆಗೆ ಒಳಪಟ್ಟವರಲ್ಲಿ 2,038 ಜನರು ಬೂಸ್ಟರ್ ಡೋಸ್ ಪಡೆದಿದ್ದರು.

ಬೂಸ್ಟರ್ ಡೋಸ್ ಪಡೆಯುವ ಮೊದಲು ಮತ್ತು ನಂತರ ಇವರಲ್ಲಾದ ಬದಲಾವಣೆಗಳನ್ನು ಪಟ್ಟಿ ಮಾಡಲಾಗಿದೆ. ಇದರ ಪ್ರಕಾರ ಬೂಸ್ಟರ್‌ ಡೋಸ್‌ ಸುರಕ್ಷಿತ ಎಂಬುದು ದೃಢಪಟ್ಟಿದೆ.  ಈ ಅಧ್ಯಯನದ ಸಮಯದಲ್ಲಿ ವಿಜ್ಞಾನಿಗಳು 3 ಮಾನದಂಡಗಳನ್ನು ಹೊಂದಿಸಿದ್ದಾರೆ. ಇದರ ಆಧಾರದ ಮೇಲೆ, ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ ಎಂದು ಖಚಿತಪಡಿಸಲಾಯಿತು. ಹೃದಯ ಬಡಿತ, ಹೃದಯ ಬಡಿತದ ಏರಿಳಿತ, ನಿದ್ರೆಯ ಗುಣಮಟ್ಟ ಮತ್ತು ದೈನಂದಿನ ಚಟುವಟಿಕೆಯ ಹಂತಗಳು ಇತ್ಯಾದಿಗಳನ್ನು ಪತ್ತೆಹಚ್ಚಲು ಸ್ಮಾರ್ಟ್ ವಾಚ್‌ಗಳನ್ನು ಬಳಸಲಾಗುತ್ತಿತ್ತು.

ಬೂಸ್ಟರ್ ಡೋಸ್‌ಗೂ ಮೊದಲು ಮತ್ತು ನಂತರ ಹೃದಯ ಬಡಿತ ಹೇಗಿದೆ ಎಂಬುದನ್ನು ಹೋಲಿಸಲಾಯ್ತು. ಎರಡೂ ಡೋಸ್ ಲಸಿಕೆಯನ್ನು ತೆಗೆದುಕೊಂಡ ನಂತರ ಹೃದಯ ಬಡಿತವು ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಆದರೆ ಮೂರನೆಯ ಬೂಸ್ಟರ್ ಡೋಸ್ ತೆಗೆದುಕೊಂಡ ನಂತರ ಹೃದಯ ಬಡಿತವು ಲಸಿಕೆ ಪೂರ್ವದ ದರಕ್ಕೆ ಮರಳಿದೆ. ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನ. ಲಸಿಕೆ ತೆಗೆದುಕೊಂಡ ನಂತರ ಕೆಲವರಲ್ಲಿ ಯಾವುದೇ ಅಡ್ಡಪರಿಣಾಮಗಳಾಗಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...