ಜ್ವರ, ತಲೆನೋವು, ಗಂಟಲು ನೋವು, ಉಸಿರಾಟದ ತೊಂದರೆ, ಮೈ ಕೈ ನೋವು, ರುಚಿ ಅಥವಾ ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ಅತಿಯಾದ ಆಯಾಸ ಹಾಗೂ ಅತಿಸಾರದಂತಹ ಲಕ್ಷಣ ಹೊಂದಿರುವವರನ್ನು ಕೋವಿಡ್ 19 ಶಂಕಿತ ಪ್ರಕರಣವೆಂದು ಗಣನನೆಗೆ ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಐಸಿಎಂಆರ್ ಡಿಜಿ ಡಾ. ಬಲರಾಮ ಭಾರ್ಗವ ಎಲ್ಲಾ ರಾಜ್ಯದ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಪತ್ರವನ್ನು ಬರೆದಿದ್ದಾರೆ.
ವಿವಿಧ ಸ್ಥಳಗಳಲ್ಲಿ ಕ್ಲಾಕ್ ಫಂಕ್ಷನಲ್ RAT ಬೂತ್ಗಳನ್ನು ಸಿದ್ಧಪಡಿಸಿ. ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಳ್ಳಿ. ಹೋಮ್ ಟೆಸ್ಟ್ ಕಿಟ್ಗಳ ಬಳಕೆಗೆ ಜನರನ್ನು ಉತ್ತೇಜಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೆಮ್ಮು, ತಲೆನೋವು, ಗಂಟಲು ನೋವು, ಉಸಿರಾಟದ ತೊಂದರೆ, ದೇಹಾಯಾಸ, ರುಚಿ ಅಥವಾ ವಾಸನೆಯ ಗ್ರಹಿಕೆ ಕಳೆದುಕೊಳ್ಳುವುದು, ಅತಿಸಾರ, ಜ್ವರ ಹೀಗೆ ಯಾವುದೇ ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿಯನ್ನು ಕೋವಿಡ್ ಶಂಕಿತನೆಂದು ಪರಿಗಣಿಸಿ ಪ್ರತ್ಯೇಕವಾಗಿ ಇಡಿ ಹಾಗೂ ಇವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ .