ಕೊರೊನಾ ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಕಾದಿದೆ ಎಂಬ ಭೀತಿ ಇರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಹೆಚ್ಚಾಗಿ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಾರೆ ಎಂದು ದೇಶದ ಖ್ಯಾತ ಮಕ್ಕಳ ವೈದ್ಯರು ಮಾಹಿತಿ ನೀಡಿದ್ದಾರೆ.
ಕೊರೊನಾ ಮೂರನೇ ಅಲೆಯಲ್ಲಿರುವ ಓಮಿಕ್ರಾನ್ ರೂಪಾಂತರಿಯಿಂದಾಗಿ ಯಾವುದೇ ಗಂಭೀರ ಲಕ್ಷಣಗಳು ಕಂಡು ಬಾರದೇ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಮಕ್ಕಳು ದಾಖಲಾಗುತ್ತಿರುವ ವೇಗದಲ್ಲಿ ಯಾವುದೇ ಏರಿಕೆ ಕಾಣದೇ ಇದ್ದರೂ ಸಹ ಮಕ್ಕಳಲ್ಲಿ ಮಲ್ಟಿಸಿಸ್ಟಂ ಊರಿಯೂತದ ಸಿಂಡ್ರೋಮ್ಗಳು ಅಲ್ಲಲ್ಲಿ ಕಾಣಿಸುತ್ತಿವೆ ಎಂದು ಹೇಳಿದೆ. ಇದು ಅಪರೂಪದ ಲಕ್ಷಣವಾಗಿದ್ದು ಸಂಭವನೀಯ ಅಡ್ಡಪರಿಣಾಮವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅರ್ಧ ಡಜನ್ಗಿಂತಲೂ ಮಕ್ಕಳ ವೈದ್ಯರು ಇದೇ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳು ಮಾತ್ರ ಕಾಣಿಸುತ್ತಿದೆ. ಮಕ್ಕಳು ಒಂದು ವಾರದ ಒಳಗೆ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಮಕ್ಕಳು ದಾಖಲಾಗುತ್ತಿರುವ ಸಂಖ್ಯೆಯಲ್ಲಿ ಅಂತಹ ಏರಿಕೆ ಕಂಡುಬಂದಿಲ್ಲ. ಆದರೆ ಕ್ಯಾನ್ಸರ್, ಯಕೃತ್ತು ಹಾಗೂ ಹೃದ್ರೋಗಗಳಂತಹ ಪರಿಸ್ಥಿತಿಯಿಂದ ದಾಖಲಾಗುತ್ತಿರುವವರ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.