ಕೊರೊನಾದಿಂದ ತತ್ತರಿಸುತ್ತಿದ್ದ ಜನ ಇನ್ನೇನು ಸುಧಾರಿಸಿಕೊಳ್ತಾ ಇದ್ದಾರೆ. ಈ ಮಧ್ಯೆಯೇ ಅನೇಕ ವೈರಸ್ ಗಳು ಜನರನ್ನು ಕಾಡ್ತಾ ಇವೆ. ಅದರಲ್ಲಿ ಝೀಕಾ ವೈರಸ್ ಕೂಡ ಒಂದು. ಈ ಪ್ರಕರಣಗಳು ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಹಾಗಾದ್ರೆ ಇದರ ಲಕ್ಷಣಗಳೇನು..? ಇದನ್ನು ತಡೆಯೋದು ಹೇಗೆ ಅಂತೀರಾ..?
ಹೌದು, ನಮ್ಮ ರಾಜ್ಯದಲ್ಲಿ ಐದು ವರ್ಷದ ಬಾಲಕಿ ಯಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿದೆ. ಈಗಾಗಲೇ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖಳಾಗ್ತಾ ಇದ್ದಾಳೆ. ಆದರೆ ಈ ಝೀಕಾ ವೈರಸ್ ಹೇಗೆ ಹರಡುತ್ತೆ ಅಂದರೆ, ಇದು ಸೊಳ್ಳೆಯಿಂದ ಹರಡುವ ರೋಗವಾಗಿದೆ. ಈಡೀಸ್ ಎಂಬ ಸೊಳ್ಳೆಯಿಂದು ಈ ಸೋಂಕು ಬರುತ್ತದೆ. ಇನ್ನು ಇದರ ಗುಣಲಕ್ಷಣಗಳು ಅಂದರೆ, ಕೀಲು ನೋವು, ತಲೆ ನೋವು, ಜ್ವರ, ವಾಂತಿ. ಇನ್ನು ಗರ್ಭಿಣಿಯರಿಗೆ ಈ ಸೋಂಕು ತಗುಲಿದರೆ ಅಪಾಯ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ರೋಗ ಲಕ್ಷಣ ಕಾಣಿಸಿಕೊಂಡವರು ಕೂಡಲೇ ವೈದ್ಯರ ಸಂಪರ್ಕ ಮಾಡಿ. ಹಾಗೂ ಚೆನ್ನಾಗಿ ವಿಶ್ರಾಂತಿ ಪಡೆಯಬೇಕಾಗಿದೆ. ದ್ರವ ರೂಪದ ಆಹಾರ ಹೆಚ್ಚಾಗಿ ತೆಗೆದುಕೊಳ್ಳಬೇಕಿದೆ. ವೈದ್ಯರು ಹೇಳುವ ಔಷಧ ಪಾಲಿಸಿದರೆ ಸಾಕು. ಹೆದರುವಂತಹದ್ದು ಏನೂ ಇಲ್ಲ. ಸರಿಯಾದ ಸಮಯಕ್ಕೆ ವೈದ್ಯರನ್ನು ಕಾಣಬೇಕು. ಇನ್ನು ಈ ಸೋಂಕು ಕಂಡು ಬಂದ ಬೆನ್ನಲ್ಲೇ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸುವಂತೆ ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.