ದೇಶದಲ್ಲಿ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಇದರ ಜೊತೆಗೆ ಮಂಕಿ ಪಾಕ್ಸ್ ಕೂಡ ಜನರನ್ನು ಕಾಡುತ್ತಿದೆ. ಈ ಎಲ್ಲದರ ನಡುವೆ ಈಗ ಟೊಮೆಟೊ ಜ್ವರ ದೇಶದ ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಕೇರಳದಲ್ಲಿ ಈ ಸೋಂಕು ದಿನೇ ದಿನೇ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ.
ಕೇರಳದ ಕೊಲ್ಲಂನಲ್ಲಿ ಟೊಮೊಟೊ ಫ್ಲೂ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಇದೀಗ ನಿಧಾನವಾಗಿ ದೇಶದಾದ್ಯಂತ ವ್ಯಾಪಿಸತೊಡಗಿದೆ. ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ಒಟ್ಟು 82 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಂದರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಹರಡುತ್ತದೆ ಎನ್ನಲಾಗಿದೆ.
ಮೊದಲಿಗೆ ಸಣ್ಣ ಕೆಂಪು ಗುಳ್ಳೆಯಂತೆ ಗೋಚರಿಸುವ ಇದು ಬಳಿಕ ದೊಡ್ಡದಾಗುತ್ತದೆ. ಸೋಂಕಿಗೊಳಗಾದವರಿಗೆ ತೀವ್ರ ಜ್ವರ, ಮೈ ಕೈ ನೋವು, ಆಯಾಸ ಹಾಗೂ ವಾಂತಿ ಇರುತ್ತದೆ. ಕೇರಳದಲ್ಲಿ ಇದು ಹೆಚ್ಚುತ್ತಿರುವ ಕಾರಣ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.