ಕೊರೊನಾ ಸ್ವರೂಪ ಮಾತ್ರ ಬದಲಾಗ್ತಿಲ್ಲ. ಕೊರೊನಾ ಲಕ್ಷಣಗಳು ಬದಲಾಗ್ತಿವೆ. ಕೊರೊನಾದ ಹೊಸ ಹೊಸ ಲಕ್ಷಣಗಳು ಹೊಸ ಸಮಸ್ಯೆ ಸೃಷ್ಟಿಸುತ್ತಿವೆ. ಕೊರೊನಾ ಮುಗಿದ ನಂತ್ರವೂ ಅನೇಕರು ಬೇರೆ ಬೇರೆ ಅಡ್ಡಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಜಪಾನ್ ನಲ್ಲಿ ಕೊರೊನಾದಿಂದ ಚೇತರಿಸಿಕೊಂಡ ರೋಗಿಗೆ ಹೊಸ ಲಕ್ಷಣ ಕಂಡು ಬಂದಿದೆ.
ಜಪಾನ್ ನಲ್ಲಿ ಕೊರೊನಾ ಸೌಮ್ಯ ಲಕ್ಷಣದಿಂದ ಬಳಲುತ್ತಿದ್ದ 77 ವರ್ಷದ ವೃದ್ಧನಿಗೆ ಮೊದಲು ಗಂಟಲಿನಲ್ಲಿ ನೋವು ಕಾಣಿಸಿಕೊಂಡಿದೆ. ನಂತ್ರ ಗುದದಲ್ಲಿ ನೋವು ತೀವ್ರ ಸ್ವರೂಪ ಪಡೆದಿದ್ದು, ಆತನಿಗೆ ಟೋಕಿಯೋ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಕೊರೊನಾದಿಂದ ಬಳಲುತ್ತಿರುವ ವ್ಯಕ್ತಿಗೆ ರೆಸ್ಟ್ಲೆಸ್ ಅನಲ್ ಸಿಂಡ್ರೋಮ್ ಉಂಟಾಗಿದೆ. ವ್ಯಕ್ತಿಯ ಗುದದ್ವಾರದಲ್ಲಿ ಅಸಹನೀಯ ನೋವುಂಟಾಗ್ತಿದೆ. ಇದನ್ನು ಮಾರಕ ವೈರಸ್ ಲಕ್ಷಣವೆಂದು ವೈದ್ಯರು ಹೇಳಿದ್ದಾರೆ. ನಿದ್ರಾಹೀನತೆ ಸಮಸ್ಯೆಯಿಂದಲೂ ವ್ಯಕ್ತಿ ಬಳಲುತ್ತಿದ್ದಾನೆ. ಕುಳಿತುಕೊಳ್ಳಲು, ಮಲಗಲು, ನಡೆದಾಡಲು ಇದ್ರಿಂದ ತೊಂದೆಯಾಗ್ತಿದೆ. ಕೊರೊನಾ ಲಕ್ಷಣಗಳಿಗಿಂತ ಇದು ಹೆಚ್ಚು ಅಪಾಯಕಾರಿ.
ಆಸ್ಪತ್ರೆಯಿಂದ ಮನೆಗೆ ಹೋದ ಮೇಲೂ ನೋವು ಕಡಿಮೆಯಾಗ್ತಿಲ್ಲ. ಹೆಚ್ಚು ವಿಶ್ರಾಂತಿ ಪಡೆದ್ರೆ ನೋವು ಹೆಚ್ಚಾಗುತ್ತದೆ. ವ್ಯಾಯಾಮ ಹಾಗೂ ವಾಕಿಂಗ್ ಇದಕ್ಕೆ ಪರಿಹಾರ. ಆದ್ರೆ ಕೊರೊನಾ ಸೋಂಕಿತರಿಗೆ ವಿಶ್ರಾಂತಿ ಅಗತ್ಯವಿದೆ. ಕೊರೊನಾದಿಂದ ಚೇತರಿಸಿಕೊಂಡವರು ಹೆಚ್ಚು ವಿಶ್ರಾಂತಿ ಪಡೆಯಬೇಕು. ಆದ್ರೆ ಗುದದ ನೋವಿಗೆ ವಿಶ್ರಾಂತಿ ಶತ್ರುವಾಗುತ್ತದೆ. ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವುದು ಕಷ್ಟ. ಸಂಜೆ ವೇಳೆಗೆ ಈ ನೋವು ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.