ಪ್ರಾಚೀನ ಕಾಲದಿಂದ್ಲೂ ಅನೇಕ ರೋಗಗಳ ಚಿಕಿತ್ಸೆಗಾಗಿ ಬೇವನ್ನು ಬಳಸಲಾಗುತ್ತದೆ. ಇದೀಗ ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್ ಗೂ ಬೇವಿನ ಮರದ ತೊಗಟೆಯೇ ಮದ್ದು ಅನ್ನೋದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.
ಕೊಲೊರಾಡೋ ವಿಶ್ವವಿದ್ಯಾನಿಲಯ ಹಾಗೂ ಕೋಲ್ಕತ್ತಾದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಬೇವಿನ ಮರದ ತೊಗಟೆ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುತ್ತದೆ. ಜೊತೆಗೆ ಕೋವಿಡ್ ಚಿಕಿತ್ಸೆಗೂ ಇದನ್ನು ಬಳಸಬಹುದು.
ವೈರಾಲಜಿ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಬೇವಿನ ತೊಗಟೆಯ ಘಟಕಗಳು, ವೈರಲ್ ಪ್ರೋಟೀನ್‌ಗಳನ್ನು ಟಾರ್ಗೆಟ್ ಮಾಡುವ ಸಾಮರ್ಥ್ಯ ಹೊಂದಿವೆ. ಇದು ಕೊರೊನಾ ವೈರಸ್ ನ SARS-CoV-2 ಸೇರಿದಂತೆ ಹೊಸ ರೂಪಾಂತರಿಗಳ ವಿರುದ್ಧ ಆಂಟಿವೈರಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣ ಹೊಂದಿರೋ ಬೇವಿನ ಮರವನ್ನು ಔಷಧಿಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ತೊಗಟೆಯ ಸಾರವು ಮಲೇರಿಯಾ, ಹೊಟ್ಟೆ ಮತ್ತು ಕರುಳಿನ ಹುಣ್ಣುಗಳು, ಚರ್ಮ ರೋಗಗಳು ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಬೇವು ಆಧಾರಿತ ಔಷಧ ಸೇವನೆಯಿಂದ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಅಪಾಯ ಕಡಿಮೆಯಾಗುತ್ತದೆ.