ಇಡೀ ವಿಶ್ವಕ್ಕೆ ಕೊರೊನಾ ಎಂಬ ಮಹಾಮಾರಿಯನ್ನು ತಗುಲಿಸಿದ ಕುಖ್ಯಾತಿಗೆ ಪಾತ್ರವಾಗಿರುವ ಚೀನಾ ಈಗಲೂ ಕೂಡ ಅದರಿಂದ ಹೊರ ಬಂದಿಲ್ಲ. ವಿಶ್ವದ ಇತರೆ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಚೀನಾದಲ್ಲಿ ಕೊರೊನಾ ದಿನೇ ದಿನೇ ಏರಿಕೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ರೋಸತ್ತು ಹೋಗಿರುವ ಚೀನಾ ಜನತೆ, ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಷ್ಟಾದರೂ ಸಹ ಪ್ರತಿಭಟನೆಗೆ ಮಣಿಯದ ಸರ್ಕಾರ ಇದನ್ನು ಹತ್ತಿಕ್ಕಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ.
ಇದರ ಮಧ್ಯೆ ಈ ಬಾರಿ ನಡೆಯಬೇಕಿದ್ದ ಚೀನಾ ಗ್ರಾಂಡ್ ಫ್ರೀ ರೇಸ್ ನಾಲ್ಕನೇ ಬಾರಿಯೂ ರದ್ದುಗೊಂಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದ್ದು, 2019 ರಿಂದ ಈಗಾಗಲೇ ಮೂರು ಬಾರಿ ಇದು ರದ್ದುಗೊಂಡಿತ್ತು.