ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ತಾಂತ್ರಿಕ ಪ್ರಮುಖರಾದ ವ್ಯಾನ್ ಕೆರ್ಖೋವ್ ಕೊರೊನಾ ವೈರಸ್ ಸ್ಥಳೀಯ ಕಾಯಿಲೆಯಾಗಿ ಬದಲಾಗುವ ಹಂತದಲ್ಲಿದೆ ಎಂದು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಕೊರೊನಾ ಅಪಾಯಕಾರಿಯಲ್ಲ ಎಂದು ಭಾವಿಸಬೇಡಿ ಎಂದೂ ಇದೇ ವೇಳೆ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಮುಗಿದುಹೋಗಿದೆ ಎಂದು ಹೇಳುವ ಕಾಲಘಟ್ಟದಲ್ಲಿ ನಾವಿಲ್ಲ. ಹೀಗಾಗಿ ನಾವು ವಿಶ್ವದ ಪ್ರತಿಯೊಂದು ದೇಶದಲ್ಲಿಯೂ ಕೊರೊನಾ ಲಸಿಕೆಯ ವೇಗವನ್ನು ಹೆಚ್ಚಿಸಬೇಕಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯತೆ ಇದೆ ಎಂದು ಕೆರ್ಖೋವ್ ಹೇಳಿದರು.
ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ಮುಖ್ಯವಾಗಿದ್ದರೂ ಸಹ ಜನರ ಜೀವವನ್ನು ಉಳಿಸಬೇಕಾದ ಅನಿವಾರ್ಯಕತೆ ಕೂಡ ಇದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ನಾವು ಕೊರೊನಾ ಲಸಿಕೆಯ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು. ಹಾಗೂ ಕೊರೊನಾ ಸಾಂಕ್ರಾಮಿಕದ ಹರಡುವಿಕೆಯನ್ನು ಕಡಿಮೆ ಮಾಡಲು, ನಮ್ಮ ಪ್ರೀತಿ ಪಾತ್ರರನ್ನು ರಕ್ಷಿಸಲು ನಾವು ಕ್ರಮ ಕೈಗೊಳ್ಳಲೇಬೇಕು ಎಂದು ಕೆರ್ಖೋವ್ ಹೇಳಿದರು.