ಕೊರೊನಾ ನಮ್ಮನ್ನು ಬಿಟ್ಟೂ ಬಿಡದೆ ಕಾಡ್ತಾ ಇದೆ. ಇನ್ನೇನು ಎಲ್ಲದರಿಂದ ಮುಕ್ತ ಆದ್ವಿ ಅನ್ನೋ ಸಮಯದಲ್ಲೇ ಮತ್ತೆ ಕೊರೊನಾ ಆತಂಕ ಎದುರಾಗಿದೆ.
ಚೀನಾದಲ್ಲಿ ಕೊರೊನಾ ಅಟ್ಟಹಾಸ ದೊಡ್ಡ ಮಟ್ಟದಲ್ಲಿ ಆಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ಇದೀಗ ಮತ್ತೊಂದು ಆತಂಕಕಾರಿ ವಿಚಾರ ಅಂದರೆ, ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಮತ್ತು ಈಗ ಪತ್ತೆಯಾಗಿರುವ ಅದರ ಉಪತಳಿಯಾದ ಎಕ್ಸ್‌ಬಿಬಿ ಭಾರತದಲ್ಲಿ ಪ್ರಬಲವಾದ ರೂಪಾಂತರಗಳೆನಿಸಿಕೊಂಡಿವೆಯಂತೆ.
ಭಾರತೀಯ ಸಾರ್ಸ್ ಕೋವ್ – 2 ಜಿನೋಮ್ ಒಕ್ಕೂಟ ತನ್ನ ಬುಲೆಟಿನ್‌ನಲ್ಲಿ ಈ ವಿಚಾರ ಬಹಿರಂಗಪಡಿಸಿದೆ. ಬಿಎ.2.75 ಮತ್ತು ಬಿಎ.2.10 ದೇಶದಲ್ಲಿ ಇನ್ನೂ ಇವೆ. ಆದರೆ ಅದರ ತೀವ್ರತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಓಮೈಕ್ರಾನ್ ಮತ್ತು ಅದರ ಉಪ-ತಳಿಗಳು ಭಾರತದಲ್ಲಿ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಎಕ್ಸ್‌ಬಿಬಿ ಅತ್ಯಂತ ವೇಗವಾಗಿ ಹರಡುವ ಉಪ ವಂಶಾವಳಿಯಾಗಿ ಭಾರತದಲ್ಲಿ ಕಾಣಿಸಿಕೊಂಡಿದೆಯಂತೆ.
ಉತ್ತರ ಭಾರತದಲ್ಲಿ ಎಕ್ಸ್ ಬಿಬಿ ಪ್ರಚಲಿತದಲ್ಲಿದ್ದರೆ, ಪೂರ್ವ ಭಾಗದಲ್ಲಿ ಬಿಎ.2.75 ಉಪತಳಿ ಹೆಚ್ಚು ಅಸ್ತಿತ್ವದಲ್ಲಿ ಇದೆ. ಇನ್ನು ಬಿಎ.2.10 ಮತ್ತು ಇತರ ಓಮೈಕ್ರಾನ್ ಉಪ-ವಂಶಾವಳಿಯ ಸಾಮರ್ಥ್ಯ ಕಳೆದ ವಾರ ಕಡಿಮೆ ಇತ್ತು. ಹೀಗಾಗಿ ಕೊಂಚ ನಿರಾಳವಾಗಿರಬಹುದು. ಆದರೆ ಇದರ ತೀವ್ರತೆ ಮುಂದೆ ಹೇಗೆ ಎಂಬುದು ಕೂಡ ಆತಂಕದ ವಿಚಾರ.