ಮಂಡ್ಯ: ಕೊರೊನಾದಿಂದ ಮೃತರಾದವರ ಮುಕ್ತಿಕಾರ್ಯಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಐನೂರಕ್ಕೂ ಹೆಚ್ಚು ಅಸ್ಥಿಗಳನ್ನು ಕಾವೇರಿ ನದಿಯಲ್ಲಿ ಸಾಮೂಹಿಕ ವಿಸರ್ಜನೆ ಮಾಡಿದೆ.
ಕೋವಿಡ್ ನೋವು, ಸಂಕಷ್ಟದ ಜೊತೆಗೆ ಮಾನವೀಯತೆಯ ಪಾಠವನ್ನು ಕಲಿಸಿದೆ. ಹಲವು ಕುಟುಂಬಗಳು ತಮ್ಮವರನ್ನ ಕಳೆದುಕೊಂಡು ಆಘಾತದಲ್ಲಿವೆ. ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಗಳನ್ನು ಸಂಬಂಧಿಗಳು ತೆಗೆದುಕೊಂಡು ಹೋಗದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿದ್ದವು. ಆದರೆ ಅವರ್ಯಾರು ಅನಾಥರಲ್ಲ. ಕುಟುಂಬಸ್ಥರು ತೆಗೆದುಕೊಂಡು ಹೋಗದ ಕಾರಣ ಸರ್ಕಾರವೇ ಆ ಸ್ಥಾನದಲ್ಲಿ ನಿಂತು ಆ ಅಸ್ಥಿಗಳಿಗೆ ಗೌರವಪೂರ್ವಕ ಹಾಗೂ ವಿಧಿವತ್ತಾದ ಮುಕ್ತಿ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಇಂದು ಅಂತಹ ಐದು ನೂರಕ್ಕೂ ಅಧಿಕ ಜನರ ಅಸ್ಥಿಯನ್ನ ಕಾವೇರಿ ನದಿಯಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು. ಕಂದಾಯ ಸಚಿವನಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಹೇಳಿದ್ದಾರೆ.