ಕೊರಿಯನ್ನರ ತ್ವಚೆಯನ್ನು ನೀವು ಗಮನಿಸಿರಬಹುದು. ಯಾವುದೇ ಮೇಕಪ್ ಇಲ್ಲದೆಯೂ ಅವರ ತ್ವಚೆ ಬಲ್ಬ್ ನಂತೆ ಹೊಳೆಯುತ್ತಿರುತ್ತದೆ. ವಿಶ್ವಾದ್ಯಂತ ಕೊರಿಯನ್ ಮಹಿಳೆಯರು ತಮ್ಮ ತ್ವಚೆಯ ಕಾರಣಕ್ಕೆ ಜನಪ್ರಿಯರಾಗಿದ್ದಾರೆ ಮತ್ತು ಅವರಿಗೆ ಬೇಗ ವಯಸ್ಸಾಗುವುದಿಲ್ಲ ಎಂಬ ನಂಬಿಕೆ ಚಾಲ್ತಿಯಲ್ಲಿದೆ.
ಅದಕ್ಕೆ ಸರಿಯಾಗಿ ಕೊರಿಯನ್ ಸೌಂದರ್ಯ ತಜ್ಞರು ಜನರನ್ನು ಚಕಿತಗೊಳಿಸುವ ಫಲಿತಾಂಶ ಕೊಡುವ ಉತ್ಪನ್ನಗಳನ್ನು ತಯಾರಿಸುವ ಭರವಸೆ ನೀಡುತ್ತಾರೆ. ಅವರ ಉತ್ಪನ್ನಗಳು ಗುಣಮಟ್ಟದಲ್ಲಿಯೂ ಉತ್ತಮವಾಗಿದೆ. ಮುಖ್ಯವಾಗಿ ಅವರು ಈ ವಸ್ತುಗಳನ್ನು ತಮ್ಮ ಉತ್ಪನ್ನಗಳ ತಯಾರಿಕೆಗೆ ಬಳಸುತ್ತಾರೆ.
ಸಿಹಿನೀರಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ರೆಡ್ ಆಲ್ಗೆಯನ್ನು ಕೊರಿಯನ್ನರು ಬಳಸುತ್ತಾರೆ. ಕೆಂಪು ಪಾಚಿ ಪೋರ್ಫೈರಾ ಎಂದು ಕರೆಯಲ್ಪಡುವ ಪಾಚಿ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇವುಗಳನ್ನು ಕೊಯ್ಲು ಮಾಡಿ ಕೊರಿಯಾದ ಸೌಂದರ್ಯ ಉತ್ಪನ್ನಗಳಲ್ಲಿ ಬಳಸುತ್ತಾರೆ. ಇದು ಚರ್ಮವನ್ನು ಬೆಳಗಿಸುವ ಗುಣವನ್ನು ಹೊಂದಿದೆ, ಇದರಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು ಇದು ಚರ್ಮದ ಮೇಲ್ಮೈಯಲ್ಲಿರುವ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.
ಇದೀಗ ಕೊರಿಯನ್ ಸೌಂದರ್ಯ ಉತ್ಪನ್ನಗಳಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿರುವ ಮತ್ತೊಂದು ಅಂಶವೆಂದರೆ ಕ್ಯಾಲೆಡುಲ (ಮಾರಿಗೋಲ್ಡ್) ಎಣ್ಣೆ, ಇದು ಚರ್ಮದ ಮಾಯಿಸ್ಚರೈಸರ್ ಹೆಚ್ಚಿಸಿ, ಚರ್ಮದ ಆಕರ್ಷಣೆ ಕುಗ್ಗಿಸುವ ಗುಣಗಳ ವಿರುದ್ಧ ಹೋರಾಡುವ ನೈಸರ್ಗಿಕ ಲಕ್ಷಣ ಹೊಂದಿದೆ.
ಆರ್ಟೆಮಿಸಿಯಾ ಎಂಬ ಮೂಲಿಕೆ ಚರ್ಮವನ್ನು ಶಾಂತಗೊಳಿಸುತ್ತದೆ ಮತ್ತು ಮೊಡವೆ ಮತ್ತು ಬಿಳಿ ತಲೆಗಳಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ವಿಟಮಿನ್ ಎ ಯನ್ನು ಹೊಂದಿದ್ದು ಇದು ಚರ್ಮದ ಪುನರುತ್ಪಾದನೆಗೆ ಸೂಕ್ತವಾಗಿದೆ.