alex Certify ಕೊಯ್ಲು ಮಾಡಿದ ಭತ್ತ, ಕೊಳವೆ ಬಾವಿ ಪೈಪ್ ಧ್ವಂಸಗೊಳಿಸಿದ ಕಾಡಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಯ್ಲು ಮಾಡಿದ ಭತ್ತ, ಕೊಳವೆ ಬಾವಿ ಪೈಪ್ ಧ್ವಂಸಗೊಳಿಸಿದ ಕಾಡಾನೆ

ಶಿವಮೊಗ್ಗ : ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ, ಅಡ್ಡೇರಿಯಲ್ಲಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು, ಕೊಯ್ಲು ಮಾಡಿ ಹಾಕಿದ್ದ ಭತ್ತ, ಹುಲ್ಲು ಹಾಗೂ ಕೊಳವೆ ಬಾವಿಗೆ ಅಳವಡಿಸಿದ್ದ ಪೈಪ್ ಲೈನ್ ದ್ವಂಸಗೊಳಿಸಿದೆ.

ಹೊರಬೈಲು, ಮತ್ತಿಕೊಪ್ಪ, ಗಾಮನಗದ್ದೆಯಲ್ಲಿ ಕಳೆದ ಅನೇಕ ದಿನಗಳಿಂದ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಶುಂಠಿ ಏರಿ ಮೇಲೆ ನಿರಂತರವಾಗಿ ಓಡಾಡುವುದರಿಂದ ಶುಂಠಿ ಏರಿ ಒಡೆದು ಬೆಳೆ ಹಾನಿಯಾಗಿದೆ. ಸಣ್ಣ ಸಣ್ಣ ಅಡಿಕೆ ಗಿಡಗಳನ್ನು ಮುರಿದು ಹಾಕುವುದಲ್ಲದೆ, ಸಣ್ಣ ಮರಗಳಿಗೆ ಮೈ ಉಜ್ಜಿಕೊಳ್ಳುವುದರಿಂದ ಮರಗಳು ಮುರಿದು ನಷ್ಟವಾಗುತ್ತಿದೆ.

ಹೊರಬೈಲಿನ ಎಲೆಬಳ್ಳಿ ಮಂಜಪ್ಪ ಹಾಗೂ ಇವರ ಸೋದರರ ಶುಂಠಿ ಹಾಗೂ ಗದ್ದೆಗೆ ಹಾನಿ ಮಾಡಿದೆ. ಗಾಮನಗದ್ದೆಯ ಹರಿಗೆಕೊಪ್ಪದ ನಾರಾಯಣಪ್ಪನರ ಕೊಯ್ಲು ಮಾಡಿ ಹಾಕಿದ್ದ ಭತ್ತದ ಗದ್ದೆಗೆ ನುಗ್ಗಿ ಹಾಳು ಮಾಡಿದೆ. ಇವರದ್ದೇ ಪೈಪ್‌ಲೈನ್‌ನ ವಾಲ್‌ಗಳನ್ನು ಮುರಿದು ಹಾಕಿದೆ.

ಪ್ರತಿನಿತ್ಯವೂ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಡೈರಿಗೆ ಹಾಲು ಹಾಕುವವರು, ದಿನನಿತ್ಯದ ಕೆಲಸ ಕಾರ್ಯಗಳಿಗೆ ಪಟ್ಟಣಗಳಿಗೆ ಹೋಗಿ ಬರುವವರು, ಶಾಲಾ ಮಕ್ಕಳು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಗದ್ದೆ ಹೊಲಗಳಲ್ಲಿ ಕೆಲಸ ಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಸಿರಿಗೆರೆ ವಲಯಾರಣ್ಯಾಧಿಕಾರಿ ಕಚೇರಿ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ನಿರಂತರವಾಗಿ ಹಾನಿ ಮಾಡುತ್ತಿರುವ ಆನೆ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...