ಮನೆಯಲ್ಲಿ ಚಟ್ನಿ ಪುಡಿ ಮಾಡಿಟ್ಟುಕೊಂಡರೆ ಇಡ್ಲಿ, ದೋಸೆ, ಅನ್ನದ ಜತೆ ಕೂಡ ಸವಿಯಬಹುದು. ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೊಬ್ಬರಿ ಚಟ್ನಿಪುಡಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಕೊಬ್ಬರಿ-1 ಕಪ್ (ತುರಿದದ್ದು) 2ಟೇಬಲ್ ಸ್ಪೂನ್-ಹುರಿಗಡಲೆ, 1.5 ಟೇಬಲ್ ಸ್ಪೂನ್-ಖಾರದ ಪುಡಿ, 2 ದಂಟಿನಷ್ಟು-ಕರಿಬೇವು, 1 ಟೀ ಸ್ಪೂನ್-ಜೀರಿಗೆ, 3-ಬೆಳ್ಳುಳ್ಳಿ ಎಸಳು, ½ ಟೀ ಸ್ಪೂನ್-ಬೆಲ್ಲ, ಚಿಕ್ಕ ಪೀಸ್-ಹುಣಸೆಹಣ್ಣು, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಕಡಾಯಿ ಇಟ್ಟು ಅದಕ್ಕೆ ಕರಿಬೇವು ಹಾಕಿ ಹಾ ಗರಿ ಗರಿಯಾಗುವವರಗೆ ಹುರಿದು ತೆಗೆಯಿರಿ. ನಂತರ ಅದೇ ಪ್ಯಾನ್ ಗೆ ಕೊಬ್ಬರಿ ತುರಿ ಸೇರಿಸಿ ಪರಿಮಳ ಬರುವವರಗೆ ಹುರಿದು ಒಂದು ತಟ್ಟೆಗೆ ತೆಗೆದುಕೊಳ್ಳಿ. ಇವೆರೆಡು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನಂತರ ಇದಕ್ಕೆ ಹುರಿಗಡಲೆ, ಖಾರದ ಪುಡಿ, ಬೆಳ್ಳುಳ್ಳಿ, ಜೀರಿಗೆ ಬೆಲ್ಲ, ಹುಣಸೆಹಣ್ಣು, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದು ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಕೊಳ್ಳಿ.