ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ಜನತೆಯನ್ನು ಭಯಭೀತಿಗೊಳಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಈ ಚಿರತೆ ಈಗಾಗಲೇ ಮೂರು ಹಸುಗಳನ್ನು ಬೇಟೆಯಾಡಿದ್ದು, ಈಗ ಬೋನಿಗೆ ಬಿದ್ದಿರುವ ಕಾರಣ ಜನತೆ ನೆಮ್ಮದಿಯ ನಿಟ್ಟಿಸಿರುಬಿಟ್ಟಿದ್ದಾರೆ.
ಚಿರತೆ, ಹಸುಗಳನ್ನು ಬೇಟೆಯಾಡಿದ್ದ ಬಳಿಕ ಗ್ರಾಮಸ್ಥರು ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹೀಗಾಗಿ ಇದರ ಸೆರೆಗಾಗಿ ಬೋನು ಇರಿಸಲಾಗಿತ್ತು.
ಹರಮಘಟ್ಟದ 200 ಮೀಟರ್ ವ್ಯಾಪ್ತಿಯಲ್ಲಿ ಬೋನು ಇಟ್ಟು, ಅದರಲ್ಲಿ ನಾಯಿಯನ್ನು ಇಡಲಾಗಿದ್ದು ಇಂದು ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಇದರ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.