ಮನೆಗೆ ತಂದ ಹಸಿರು ಸೊಪ್ಪುಗಳನ್ನು ಬಹಳ ದಿನ ಇಡೋದು ಕಷ್ಟ. ಕೆಲವರು ಫ್ರಿಜ್ ನಲ್ಲಿಟ್ಟು ಸೊಪ್ಪನ್ನು ಕೊಳೆಸಿದ್ರೆ ಮತ್ತೆ ಕೆಲವರು ಹೊರಗಿಟ್ಟು ಒಣಗಿಸಿ ಹಾಳು ಮಾಡ್ತಾರೆ. ಅದ್ರಲ್ಲಿ ಕೊತ್ತಂಬರಿ ಸೊಪ್ಪು ಕೂಡ ಒಂದು. ಕೊತ್ತಂಬರಿ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸ್ತಾರೆ. ಹಾಗೆ ಎಲ್ಲ ಮಸಾಲೆ ಪದಾರ್ಥಗಳ ರುಚಿ ಹೆಚ್ಚಿಸಲು ಉಪಯೋಗಿಸ್ತಾರೆ.
ಅಂಗಡಿಯಿಂದ ಮನೆಗೆ ತಂದು ಒಂದು ದಿನ ಕೂಡ ಆಗಿಲ್ಲ. ಆಗ್ಲೆ ಕೊತ್ತಂಬರಿ ಸೊಪ್ಪು ಹಾಳಾಯ್ತು ಎನ್ನುವವರಿದ್ದಾರೆ. ಅಂತವರು ಸುಲಭ ಟಿಪ್ಸ್ ಅನುಸರಿಸಿ ಕೊತ್ತಂಬರಿ ಸೊಪ್ಪು ತಾಜಾ ಇರುವಂತೆ ನೋಡಿಕೊಳ್ಳಬಹುದು.
ಗ್ಲಾಸ್ ಗೆ ನೀರು ಹಾಕಿ ಕೊತ್ತಂಬರಿ ಸೊಪ್ಪಿನ ಬುಡವನ್ನು ಅದ್ರಲ್ಲಿ ನೆನೆಸಿಡಿ.
ನೀರಿನ ಗ್ಲಾಸನ್ನು ಗಾಳಿಯಾಡುವ ಸ್ಥಳದಲ್ಲಿಡಿ.
ಕೊತ್ತಂಬರಿ ಸೊಪ್ಪಿನ ಎಲೆಯನ್ನು ತೆಗೆದು ಗಾಳಿಯಾಡದ ಡಬ್ಬದಲ್ಲಿ ತುಂಬಿ ಫ್ರಿಜ್ ನಲ್ಲಿಟ್ಟರೂ ಅದು ತಾಜಾ ಆಗಿರುತ್ತದೆ.
ಒಂದು ಪೇಪರ್ ನಲ್ಲಿ ಕೊತ್ತಂಬರಿ ಸೊಪ್ಪನ್ನು ಸುತ್ತಿಯಿಟ್ಟರೂ ಕೊತ್ತಂಬರಿ ಸೊಪ್ಪು ಹಾಳಾಗುವುದಿಲ್ಲ.