
ವಾತಾವರಣದಲ್ಲಿನ ಮಾಲಿನ್ಯ, ಧೂಳುಗಳಿಂದ ಮುಖದ ಸ್ಕಿನ್ ಹಾಳಾ ಗುತ್ತದೆ. ಮೊಡವೆ, ಬ್ಲ್ಯಾಕ್ ಹೆಡ್ಸ್ ಮತ್ತು ಒಣ ಚರ್ಮದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಕೊತ್ತಂಬರಿ ರಸವನ್ನು ಈ ರೀತಿಯಾಗಿ ಬಳಸಿ.
ಕೊತ್ತಂಬರಿ ರಸ ಮತ್ತು ಅರಿಶಿನ ಎರಡು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇವು ಗುಳ್ಳೆಗಳನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತವೆ. ಕೊತ್ತಂಬರಿ 86.3% ತೇವಾಂಶವನ್ನು ಹೊಂದಿದ್ದು, ಅದು ನಿಮ್ಮ ಚರ್ಮವನ್ನು ತೇವಾಂಶಗೊಳಿಸುತ್ತದೆ. ಅರಶಿನ ಚರ್ಮವನ್ನು ಶುದ್ಧೀಕರಿಸಿ ಹೊಳಪನ್ನು ನೀಡುತ್ತದೆ.
ಹಾಗಾಗಿ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಸೋಸಿ. ಈ ರಸಕ್ಕೆ 1 ಚಿಟಿಕೆ ಅರಿಶಿನ ಮಿಕ್ಸ್ ಮಾಡಿ ರಾತ್ರಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ಬೆಳಿಗ್ಗೆ ವಾಶ್ ಮಾಡಿಕೊಳ್ಳಿ. ಸತತವಾಗಿ ಮೂರ್ನಾಲ್ಕು ರಾತ್ರಿ ಹೀಗೆ ಮಾಡುವುದರಿಂದ ಮೊಡವೆ, ಬ್ಲ್ಯಾಕ್ ಹೆಡ್ಸ್ ಮತ್ತು ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.