ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತವಾಗಿದ್ದ ಕೊಡಮಗ್ಗಿ ಗ್ರಾಮದ ‘ಕೊಬ್ಬರಿ ಹೋರಿ’ ಹೃದಯಘಾತದಿಂದ ಕೊನೆಯುಸಿರೆಳೆದಿದೆ.
ಹಾವೇರಿ ಜಿಲ್ಲೆ ರಟ್ಟೆಹಳ್ಳಿ ತಾಲೂಕಿನ ಕೊಡಮಗ್ಗಿ ಗ್ರಾಮದ ಮುತ್ತುರಾಜ್ ಚಳಗೇರಿ ಎಂಬವರಿಗೆ ಸೇರಿದ ಈ ಹೋರಿ ಮೂಕಾಂಬಿಕಾ ಎಕ್ಸ್ ಪ್ರೆಸ್, ಚಾಮುಂಡಿ ಎಕ್ಸ್ ಪ್ರೆಸ್ ಎಂಬ ಹೆಸರಿನಿಂದ ಖ್ಯಾತಿಯಾಗಿತ್ತು.
ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪ್ರಶಸ್ತಿ ಗೆದ್ದಿದ್ದ ಈ ಹೋರಿ, ಶುಕ್ರವಾರ ಸಾವಿಗೀಡಾಗಿದ್ದು, ಶನಿವಾರ ಸಂಜೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.