ಕೊಡಗಿನಲ್ಲಿ ಭೂಕಂಪದ ಆತಂಕ ಹೆಚ್ಚಾಗಿದೆ. ಒಂದು ಕ್ಷಣ ಭೂಮಿ ಕಂಪಿಸಿದ ಪರಿಣಾಮ ಜಿಲ್ಲೆಯ ಜನತೆ ಬೆದರಿದ್ದಾರೆ. ಜೂನ್ 26ರಂದು ಬೆಳಗ್ಗೆ 7:45ಕ್ಕೆ ಚೆಂಬು ಎಂಬ ಗ್ರಾಮದಲ್ಲಿ ಸಂಭವಿಸಿದ್ದ ಭೂಕಂಪದ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಚೆಂಬು ಗ್ರಾಮದಲ್ಲಿ ಜೂನ್ 26ರಂದು 3.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಮಿಯೊಳಗಿನಿಂದ ಭಾರೀ ಪ್ರಮಾಣದ ಸದ್ದು ಕೇಳಿ ಬಂದಿತ್ತು.
ಭೂಕಂಪನವಾಗುತ್ತಿದ್ದಂತೆಯೇ ಕಾಡಿನಲ್ಲಿದ್ದ ನವಿಲು ಸೇರಿದಂತೆ ಇತರೆ ಪಕ್ಷಿಗಳು ಕೂಗಲು ಆರಂಭಿಸಿದ್ದವು. ಗ್ರಾಮದ ನಾಯಿಗಳು ಬೆದರಿ ಬೊಗಳಿದ ದೃಶ್ಯಗಳು ಸಹ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚೆಂಬು ಗ್ರಾಮದ ತೊಡಿಕಾನ ಎಂಬಲ್ಲಿ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಸ್ಥಳೀಯರ ಮೊಬೈಲ್ಗಳಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ.