ರೈಲ್ವೆ ಸ್ಟೇಷನ್ ನಲ್ಲಿ ಪ್ರಯಾಣಿಕರೊಬ್ಬರು ಸೂಪರ್ ಫಾಸ್ಟ್ ಟ್ರೇನ್ ಗೆ ಗ್ವಾಲಿಯರ್ ಗೆ ಟಿಕೆಟ್ ಕೇಳಿದ್ದಾರೆ. ಆದರೆ ರೈಲ್ವೆ ಅಧಿಕಾರಿ ನೋಡ ನೋಡುತ್ತಿದ್ದಂತೆ ಪ್ರಯಾಣಿಕ ಕೊಟ್ಟಿದ್ದ 500 ರೂಪಾಯಿಯನ್ನು ಮಂಗಮಾಯ ಮಾಡಿ, 20 ರೂಪಾಯಿ ಮಾಡಿದ್ದಾನೆ. ರೈಲ್ವೆ ಅಧಿಕಾರಿಯ ಮೋಸದಾಟ ಕಂಡು ಸಾರ್ವಜನಿಕರು ಅವಾಕ್ಕಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ರೈಲ್ವೆ ಅಧಿಕಾರಿ ಈ ರೀತಿ ಮೋಸ ಮಾಡಿದರೆ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದ್ದಾರೆ.