ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ.
ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ.
ಕಾರವಾರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವ ಕಡಲ ತೀರ ದೂರದಿಂದಲೇ ನಿಮ್ಮನ್ನು ಸೆಳೆಯುತ್ತದೆ. ಹೊಳೆಯುವ ಮರಳು, ಅಲ್ಲಿನ ಸೌಂದರ್ಯ, ದೂರದಲ್ಲಿ ಕಾಣುವ ಹಡಗುಗಳು, ಸಮೀಪದಲ್ಲೇ ಇರುವ ದೋಣಿಗಳು, ನದಿ, ಸೇತುವೆ ಒಂದೆ, ಎರಡೇ ಇಲ್ಲಿನ ಸೌಂದರ್ಯವನ್ನು ನೋಡಿಯೇ ಸವಿಯಬೇಕು.
ಕಾರವಾರ ವಿಭಿನ್ನ ಭೌಗೋಳಿಕ ಪರಿಸರವನ್ನು ಹೊಂದಿರುವ ಜಿಲ್ಲೆ. ದಟ್ಟವಾದ ಅರಣ್ಯ, ಪರ್ವತ ಶ್ರೇಣಿ, ಕಡಲ ತೀರ, ಐತಿಹಾಸಿಕ, ಪೌರಾಣಿಕ ಯಾತ್ರ ಸ್ಥಳಗಳು ಜಿಲ್ಲೆಯಲ್ಲಿವೆ.
ಕಾಳಿ ನದಿ ಅರಬ್ಬೀ ಸಮುದ್ರ ಸೇರುವ ದೃಶ್ಯ ನಯನ ಮನೋಹರವಾಗಿದೆ. ಕೊಂಕಣ ರೈಲ್ವೇ ಅಂದವನ್ನು ಹೆಚ್ಚಿಸಿದೆ.
ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್, ಹುಬ್ಬಳ್ಳಿಯಿಂದ 170 ಕಿಲೋ ಮೀಟರ್ ದೂರದಲ್ಲಿರುವ ಕಾರವಾರಕ್ಕೆ ಸಾರಿಗೆ ಸಂಪರ್ಕವಿದೆ.
ಸಿನಿಮಾ ಒಂದರಲ್ಲಿ ‘ನಾ ನೋಡಿ ನಲಿಯುವ ಕಾರವಾರ..’ ಎಂಬ ಹಾಡಿದೆ. ಕಾರವಾರಕ್ಕೆ ಬಂದರೆ ನಿಮ್ಮ ಮನಸು ನಲಿದಾಡುತ್ತದೆ. ಇಂತಹ ಕಾರವಾರದ ಸೌಂದರ್ಯವನ್ನೊಮ್ಮೆ ನೋಡಬನ್ನಿ.