ಟ್ಯಾಟೂ ಹಾಕಿಸಿಕೊಳ್ಳೊದು ಕೂಡಾ ಕ್ರೇಜ್. ಕೆಲವರು ತಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಹ ಟ್ಯಾಟೂ ಹಾಕಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರ ನೆನಪಿಗಾಗಿ ಟ್ಯಾಟೂ ಹಾಕಿಸಿಕೊಳ್ತಾರೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಮಾಜಿ ಪ್ರಿಯಕರನ ಚಿತ್ರವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಅದೂ ಕೂಡಾ ತನ್ನ ಕೆನ್ನೆಯ ಮೇಲೆ
ಕೇಳುವುದಕ್ಕೆ ಇದು ವಿಚಿತ್ರ ಎನಿಸಿದರೂ ನಿಜ. ನಾರಲಿ ನಜಮ್ ಹೆಸರಿನ ಯುವತಿ ತನ್ನ ಗೆಳೆಯ ಮೋಸ ಮಾಡಿದ ಅನ್ನೋ ಕಾರಣಕ್ಕಾಗಿ ಸೇಡು ತೀರಿಸಿಕೊಳ್ಳಲೆಂದೇ, ಈ ರೀತಿ ಕೆನ್ನೆಯ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ನಿರ್ಧಾರವನ್ನ ಮಾಡಿದ್ದಾಳೆ. ಈಕೆ ಓರ್ವ ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ಆಗಿದ್ದು ಲಕ್ಷಾಂತರ ಜನರು ಈಕೆಯ ಅಕೌಂಟ್‌ನ್ನ ಫಾಲೋ ಮಾಡುತ್ತಿದ್ದಾರೆ. ತನ್ನ ಫಾಲೋವರ್ಸ್‌ಗಳಿಗೆ, ಪ್ರಿಯಕರನ ಬಗ್ಗೆ, ಹಾಗೂ ತಮ್ಮ ರಿಲೆಶನ್ ಶಿಪ್ ಬಗ್ಗೆ ಆಗಾಗ ಅಪ್ಡೇಟ್ ಮಾಡುತ್ತಲೇ ಇರುತ್ತಿದ್ದಳು. ಇತ್ತೀಚೆಗೆ ಈಕೆ ತಮ್ಮ ಪ್ರೀತಿಯ ಗುರುತಾಗಿರುವ ಮಗನ ಬಗ್ಗೆಯೂ ಫಾಲೋವರ್ಸ್ಗಳಿಗೆ ಹೇಳಿದ್ದಳು. ಆ ಮಗುವಿನ ಹೆಸರು ರಾಜಾ ಎಂದು ಇಡಲಾಗಿದೆ.
ಇತ್ತೀಚೆಗೆ ನಾರಲಿ ನಜಮ್ ಮತ್ತೊಂದು ಫೋಟೋ ಹಾಗೂ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ ಕೆನ್ನೆ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಕಾರಣವನ್ನ ಹೇಳಿದ್ಧಾಳೆ. “ ನನ್ನ ಮುಖದ ಮೇಲೆ ಆತನ ಅಪ್ಪನ ಮುಖದ ಹಚ್ಚೆ ಹಾಕಿಸಿಕೊಂಡಿದ್ದೇನೆ. ನಾನು ಈ ರೀತಿ ಮಾಡಿಕೊಂಡಿದ್ದರಿಂದ ಎಲ್ಲರೂ ನನ್ನ ಬಗ್ಗೆ ಅಸೂಯೆ ಪಟ್ಟಿದ್ದಾರೆ. ಅಪ್ಪ ಮೋಸ ಮಾಡಿರಬಹುದು, ಆದರೆ ಹಿಂದಿರುಗಿ ಬರುತ್ತಾನೆ.“ ಎಂದು ಈ ಪೋಸ್ಟ್ ಶೀರ್ಷಿಕೆಯಲ್ಲಿ ಬರೆದಿದ್ದಾಳೆ. ಇದನ್ನ ಓದುತ್ತಿದ್ದರೆ ಈಕೆ ಮತ್ತೆ ಆತನ ಜೊತೆ ರಾಜಿ ಮಾಡಿಕೊಳ್ಳುವುದಕ್ಕೆ ಮನಸ್ಸು ಮಾಡಿರುವ ಹಾಗಿದೆ.
ಅಷ್ಟೆಅಲ್ಲ, ತಾನು ಹಿಂದೆ ಪ್ರಸವ ವೇದನೆಯಲ್ಲಿದ್ದಾಗಲೂ ತನ್ನ ಪ್ರಿಯಕರ ತನಗೆ ಮೋಸ ಮಾಡಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ ಈ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ನೆಟ್ಟಿಗರು ಇದು ಹುಚ್ಚಾಟವೋ,ಇಲ್ಲ ಪ್ರೀತಿಯ ಪರಮಾವಧಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ನಾರಲಿ ತಾನು ಪ್ರೀತಿಸಿದ ಹುಡುಗ ಹೇಗ್ಹೇಗೆ ತನಗೆ ಮೋಸ ಮಾಡಿದ್ದಾನೆ ಅಂತ ತಾನು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸವಿಸ್ತಾರವಾಗಿ ಹೇಳಿಕೊಂಡಿದ್ದಾಳೆ.
ಆದರೆ ಏನೇ ಅನ್ನಿ ಮೋಸ ಮಾಡಿರುವ ಹುಡುಗನಿಗೆ ಬುದ್ಧಿ ಕಲಿಸೋದಕ್ಕೆ ಈಕೆ ತೆಗೆದುಕೊಂಡ ನಿರ್ಧಾರ ಹುಚ್ಚಾಟ ಅಂತ ಅನ್ನಿಸದೇ ಇರೋಲ್ಲ.