alex Certify ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯ ಸ್ಪೂರ್ತಿ ಕಂಡು ಆನಂದ್ ಮಹೀಂದ್ರಾ ಮೆಚ್ಚುಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯ ಸ್ಪೂರ್ತಿ ಕಂಡು ಆನಂದ್ ಮಹೀಂದ್ರಾ ಮೆಚ್ಚುಗೆ..!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅವರು ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ತನ್ನ ಅಂಗವೈಕಲ್ಯ ಒಂದು ನ್ಯೂನತೆಯಾಗಲು ಬಿಡದ ದೆಹಲಿಯ ವ್ಯಕ್ತಿಯಿಂದ ವಿಸ್ಮಯಗೊಂಡಿದ್ದಾರೆ.

ಕ್ವಾಡ್ರುಪಲ್ ಅಂಗವಿಕಲನಾಗಿದ್ದರೂ, ಆ ವ್ಯಕ್ತಿ ಮಾರ್ಪಡಿಸಿದ ವಾಹನವನ್ನು ಚಾಲನೆ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ, ಕೈ- ಕಾಲುಗಳಿಲ್ಲದ ವ್ಯಕ್ತಿಯು ದಾರಿಹೋಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವರು ತಮ್ಮ ಮಾರ್ಪಡಿಸಿದ ವಾಹನದ ಬಗ್ಗೆ ಹೇಳುತ್ತಾರೆ. ವಿಡಿಯೋವನ್ನು ಚಿತ್ರೀಕರಿಸುವ ವ್ಯಕ್ತಿಯ ಕೋರಿಕೆಯ ಮೇರೆಗೆ, ಕೈಕಾಲುಗಳಿಲ್ಲದಿದ್ದರೂ ಅವರು ವಾಹನವನ್ನು ಹೇಗೆ ಓಡಿಸುತ್ತಾರೆ ಎಂಬುದನ್ನು ಸಹ ಪ್ರದರ್ಶಿಸಿದ್ದಾರೆ.

ತನಗೆ ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಮತ್ತು ವಯಸ್ಸಾದ ತಂದೆ ಇದ್ದಾರೆ. ಅದಕ್ಕಾಗಿಯೇ ತಾನು ದುಡಿಯಲು ಹೋಗುವುದಾಗಿ ಹೆಸರು ಹೇಳಲಿಚ್ಛಿಸದ ವ್ಯಕ್ತಿ ಹೇಳಿದ್ದಾರೆ. ಐದು ವರ್ಷಗಳಿಂದ ತನ್ನ ವಾಹನವನ್ನು ಓಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಜನರಿಂದ ಅಭಿನಂದನೆಗಳ ಸುರಿಮಳೆಯಾದಾಗ, ಆತ ಸುಮ್ಮನೆ ಮುಗುಳ್ನಕ್ಕು ದೇವರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು ಆ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ತನ್ನ ಅಂಗವೈಕಲ್ಯವನ್ನು ಎದುರಿಸಿದ ಈ ಸಂಭಾವಿತ ವ್ಯಕ್ತಿಯಿಂದ ತಾನು ವಿಸ್ಮಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ತಮ್ಮ ಸಹೋದ್ಯೋಗಿಯನ್ನು ಟ್ಯಾಗ್ ಮಾಡಿ, ಈತನನ್ನು ವ್ಯಾಪಾರ ಸಹಾಯಕರನ್ನಾಗಿ ಮಾಡಬಹುದೇ? ಎಂದು ಕೇಳಿಕೊಂಡಿದ್ದಾರೆ.

ಈ ವಿಡಿಯೋವನ್ನು ಮಹೀಂದ್ರಾ ಅವರು ಹಂಚಿಕೊಂಡಾಗಿನಿಂದ ಟ್ವಿಟರ್‌ನಲ್ಲಿ 50,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕಮೆಂಟ್‌ ವಿಭಾಗದಲ್ಲಿ, ಒಬ್ಬ ಟ್ವಿಟ್ಟರ್ ಬಳಕೆದಾರರು ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಸುತ್ತಲೂ ಈ ವ್ಯಕ್ತಿಯನ್ನು ನೋಡಿದ್ದಾಗಿ ಹೇಳಿದ್ದಾರೆ.

— anand mahindra (@anandmahindra) December 27, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...