ಕೈನಲ್ಲಿರುವ ವಸ್ತು ಅನೇಕ ಬಾರಿ ಕೆಳಗೆ ಬೀಳುತ್ತದೆ. ಕೈಜಾರಿ ವಸ್ತು ಬಿತ್ತು ಎಂದು ನಾವು ಸುಮ್ಮನಾಗ್ತೇವೆ. ಆದ್ರೆ ಹಿರಿಯರು ಇದು ಅಶುಭ ಎಂದು ತಟ್ಟನೆ ಹೇಳ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ವಸ್ತು ಕೈಜಾರಿ ಕೆಳಗೆ ಬಿದ್ರೆ ಶುಭ ಹಾಗೂ ಯಾವುದು ಅಶುಭ ಎಂಬುದನ್ನು ಹೇಳಲಾಗಿದೆ.
ತುಂಬಿದ ಕೊಡ ಕೈಜಾರಿ ಕೆಳಗೆ ಬಿದ್ರೆ ಅದು ಅಶುಭ. ಕೆಲವೇ ದಿನಗಳಲ್ಲಿ ರೋಗ ಮನೆ ಬಾಗಿಲಿಗೆ ಬರಲಿದೆ ಎಂದರ್ಥ.
ಅಡುಗೆ ಮನೆಯಲ್ಲಿ ಅಡುಗೆ ಮಾಡುವ ವೇಳೆ ಎಣ್ಣೆ ಕೆಳಗೆ ಬಿದ್ರೆ ಮನೆ ಸದಸ್ಯರ ಮೇಲೆ ಸಾಲದ ಹೊರೆ ಬೀಳಲಿದೆ ಎಂದರ್ಥ. ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂಬ ಸಂಕೇತ.
ದೇವರ ಮನೆಯಲ್ಲಿ ಪೂಜೆ ಮಾಡುವ ವೇಳೆ ಪೂಜಾ ಸಾಮಗ್ರಿ ಅಥವಾ ಆರತಿ ಕೈತಪ್ಪಿ ಬಿದ್ರೆ ಅಪಶಕುನ. ಮನೆಯಲ್ಲಿ ದುಃಖಕರ ಘಟನೆ ನಡೆಯಲಿದೆ ಎಂಬುದರ ಮುನ್ಸೂಚನೆ.
ಕೈನಲ್ಲಿದ್ದ ಕುಂಕುಮ ಕೆಳಗೆ ಬಿದ್ರೆ ಪತಿಗೆ ಸಂಕಟ ಎದುರಾಗಲಿದೆ ಎಂಬುದರ ಸೂಚನೆ. ಪತಿ ಸಾವು ಹತ್ತಿರ ಬರ್ತಿದೆ ಎಂಬುದರ ಸಂಕೇತವೂ ಇದಾಗಿರಲು ಸಾಧ್ಯ.
ಕುದಿಯುತ್ತಿರುವ ಹಾಲು ಉಕ್ಕಿ ಕೆಳಗೆ ಬಿದ್ರೆ ಮನೆಯಲ್ಲಿ ಗಲಾಟೆ ನಡೆಯುವ ಸಾಧ್ಯತೆಯಿರುತ್ತದೆ. ಸಂಬಂಧಿಕರ ಮಧ್ಯೆಯಿರುವ ಬಾಂಧವ್ಯ ಹಾಳಾಗುವ ಸಾಧ್ಯತೆಯಿದೆ.
ಕಾಳು ಮೆಣಸು ಕೈತಪ್ಪಿ ಕೆಳಗೆ ಬಿದ್ರೆ ಪ್ರೀತಿ ಪಾತ್ರರ ಮಧ್ಯೆ ಭಿನ್ನಾಭಿಪ್ರಾಯ ಮೂಡಲಿದೆ ಎಂದರ್ಥ.
ಉಪ್ಪು ಕೈತಪ್ಪಿ ಬಿದ್ರೆ ಶುಕ್ರ ಹಾಗೂ ಚಂದ್ರನ ನಕಾರಾತ್ಮಕ ಪ್ರಭಾವಕ್ಕೆ ನೀವು ಒಳಗಾಗಲಿದ್ದೀರಿ ಎಂದುಕೊಳ್ಳಿ.