
ಬೂಮ್‌ಬಾಕ್ಸ್ ಬ್ಯಾಂಡ್‌ನ ಉಕ್ರೇನ್ ಗಾಯಕ ಆಂಡ್ರಿ ಖ್ಲಿವ್ನ್ಯುಕ್ ರಷ್ಯಾದ ವಿರುದ್ಧ ಹೋರಾಡಲು ಸೈನ್ಯಕ್ಕೆ ಸೇರಿದ್ದಾರೆ. ಇದೀಗ, ಜನಪ್ರಿಯ ಗಾಯಕನ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸೆಂಟ್ರಲ್ ಕೈವ್‌ನ ನಿರ್ಜನ ಬೀದಿಯಲ್ಲಿ ಆಂಡ್ರಿ ತಮ್ಮ ಕೈಯಲ್ಲಿ ಗನ್ ಹಿಡಿದು ಹಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ಉಕ್ರೇನ್ ಪರ ಧ್ವನಿ ಎತ್ತಿದ್ದು, ಯುದ್ಧ ನಿಲ್ಲಿಸಿ ಎಂಬಂತಹ ಘೋಷವಾಕ್ಯಗಳನ್ನು ಮಾಡಿದ್ದಾರೆ.