ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ ಮಾಡಿ ಶಾಂತತೆ ನೆಲೆಸುವ ಶಕ್ತಿ ಇದೆ. ಇದರಿಂದ ಕೀಲು ನೋವು, ಕೆಮ್ಮು, ಶೀತ ಕಫಗಳೂ ಕಡಿಮೆಯಾಗುತ್ತವೆ.
ಇನ್ನು ದೃಷ್ಟಿಯಾಗಬಾರದೆಂದೂ ಬೆಳ್ಳಿ ಉಂಗುರ ಧರಿಸುವವರಿದ್ದಾರೆ. ಕೈಯನ್ನೇ ಬಂಡವಾಳ ಮಾಡಿಕೊಂಡು ದುಡಿಯುವ ಕಾರ್ಮಿಕರು ವಿಪರೀತ ಕೈ ಸೆಳೆತ ಕಾಣಿಸಿಕೊಂಡಾಗ ಬೆಳ್ಳಿಯ ಉಂಗುರ ಮಾಡಿಸಿ ಹಾಕಿಕೊಳ್ಳುತ್ತಾರೆ. ಇದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ ಎಂಬ ನಂಬಿಕೆ ಅವರದ್ದು.
ಇಂದು ಫ್ಯಾಶನ್ ಲೋಕದಲ್ಲಿ ಬೆಳ್ಳಿಯ ಹಲವಾರು ವಿನ್ಯಾಸದ ಉಂಗುರಗಳಿವೆ. ಆಯಾ ನಕ್ಷತ್ರಕ್ಕೆ ಹೊಂದಿಕೆಯಾಗುವ ಕಲ್ಲುಗಳ ಉಂಗುರಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೀಗಾಗಿ ಆಭರಣ ಪ್ರಿಯರು ಬಂಗಾರದ ಉಂಗುರದಲ್ಲಿ ತಮ್ಮ ನಕ್ಷತ್ರದ ಕಲ್ಲುಗಳನ್ನು ಕಟ್ಟಿಕೊಳ್ಳುವ ಬದಲು ಹೀಗೆ ಬೆಳ್ಳಿಯ ಉಂಗುರದಲ್ಲೇ ಕಟ್ಟಿಸಿಕೊಳ್ಳುತ್ತಾರೆ. ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಾಗಲೂ ಇದನ್ನೇ ಕೊಡುತ್ತಾರೆ.
ಸಂಗಾತಿಗಳ ನಡುವಿನ ಸಂಘರ್ಷವನ್ನೂ ನಿವಾರಿಸುವ ಶಕ್ತಿ ಈ ಬೆಳ್ಳಿಗಿದ್ದು ಹಾಗಾಗಿ ಪತಿ – ಪತ್ನಿಯರಿಬ್ಬರೂ ಬೆಳ್ಳಿಯ ಉಂಗುರವನ್ನು ಧರಿಸುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ. ಹಾಗಾದರೆ ತಡ ಏಕೆ, ಅದೃಷ್ಟ ಹಾಗೂ ಸೌಂದರ್ಯ ನೀಡುವ ಬೆಳ್ಳಿ ಉಂಗುರವನ್ನು ಇಂದೇ ಕೊಳ್ಳಿ ಹಾಗೂ ಧರಿಸಿ.