ಅನಾದಿ ಕಾಲದಿಂದಲೂ ಅಲಂಕಾರ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಡಿಯಿಂದ ಮುಡಿವರೆಗೂ ಆಭರಣ ತೊಟ್ಟುಕೊಂಡು ಸರ್ವಾಲಂಕಾರಭೂಷಿತೆಯಾಗಿರಬೇಕೆಂದು ಹೆಣ್ಣು ಬಯಸುತ್ತಾಳೆ. ಕಾಲಿಗೆ ಕಾಲುಂಗುರ, ಕಾಲ್ಗೆಜ್ಜೆಯಿಂದ ಅಲಂಕಾರ ಮಾಡಿಕೊಂಡರೆ ಕೈಗಳನ್ನು ಉಂಗುರ ಮತ್ತು ಬಳೆಗಳಿಂದ ಆಲಂಕಾರಗೊಳಿಸಿಕೊಳ್ಳುತ್ತಾರೆ.
ಆಧುನಿಕತೆ ಬೆಳೆದಂತೆಲ್ಲಾ ಇಂದಿನ ಫ್ಯಾಷನ್ ಗೆ ತಕ್ಕಂತೆ ಆಭರಣಗಳಲ್ಲಿಯೂ ಬದಲಾವಣೆಗಳಾಗುತ್ತಿವೆ. ಬಣ್ಣ ಬಣ್ಣದ ಗಾಜಿನ ಪ್ಲಾಸ್ಟಿಕ್ ಬಳೆಗಳ ಸ್ಥಾನವನ್ನು ವಿವಿಧ ನಮೂನೆಯ ಬ್ರೇಸ್ ಲೆಟ್ ಗಳು ಪಡೆದುಕೊಳ್ಳುತ್ತಿವೆ.
ದುಬಾರಿ ಬೆಲೆಯ ಚಿನ್ನದ ಬ್ರೇಸ್ ಲೆಟ್ ಗಳಿಂದ ಹಿಡಿದು ಕಡಿಮೆ ವೆಚ್ಚದ ಮಣಿಗಳ, ಹರಳುಗಳ ಬ್ರೇಸ್ ಲೆಟ್ ಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಆಧುನಿಕ ಡ್ರೆಸ್ ಗಳಿಗೆ ಹೊಂದಿಕೆಯಾಗುವಂತಹ, ತಮ್ಮ ಮಣಿಕಟ್ಟಿಗೆ ಸರಿ ಹೊಂದುವಂತಹ ಬ್ರೇಸ್ ಲೆಟ್ ಗಳನ್ನು ಆಯ್ಕೆ ಮಾಡಿಕೊಂಡು ಧರಿಸಿದರೆ ಆಕರ್ಷಕವಾಗಿ ಕಾಣಬಹುದು.