
ಈ ಸ್ಪೂರ್ತಿದಾಯಕ ಕಥೆಯಲ್ಲಿ, ತಮಗೆ ಕೈಗಳಿಲ್ಲದಿದ್ದರೂ ಭಿಕ್ಷೆ ಬೇಡದೆ ವ್ಯಕ್ತಿಯೊಬ್ಬರು ತಾವೇ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ವಿಕಲಚೇತನ ವ್ಯಕ್ತಿಯೊಬ್ಬರು ರಸ್ತೆಬದಿಯ ತಳ್ಳೋ ಗಾಡಿಯಲ್ಲಿ ಫಾಸ್ಟ್ ಫುಡ್ ತಯಾರಿಸುತ್ತಿದ್ದಾರೆ. ವೈರಲ್ ಆಗಿರೋ ವಿಡಿಯೋದಲ್ಲಿ ಅವರು ನೂಡಲ್ಸ್ ತಯಾರಿಸುವುದನ್ನು ನೋಡಬಹುದು.
ಎಡಗೈ ಬಹುತೇಕ ಕಾರ್ಯನಿರ್ವಹಿಸದ ಕಾರಣ ಅವರು, ನೂಡಲ್ಸ್ ಅನ್ನು ಬೆರೆಸಲು ಮತ್ತು ಮಿಶ್ರಣ ಮಾಡಲು ತನ್ನ ಬಲಗೈಯನ್ನು ಬಳಸಿದ್ದಾರೆ. ಆ ವ್ಯಕ್ತಿಯ ಸಂಕಲ್ಪ ಮತ್ತು ಬಲವಾದ ಇಚ್ಛಾಶಕ್ತಿಯನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಅಂತಹ ಸ್ಪೂರ್ತಿದಾಯಕ ಉದಾಹರಣೆಗಾಗಿ ಅವರನ್ನು ಶ್ಲಾಘಿಸಿದ್ದಾರೆ.
ರಾಹುಲ್ ಮಿಶ್ರಾ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರ ಉದಾಹರಣೆಯಿಂದ ಸ್ಫೂರ್ತಿ ಪಡೆದಿದ್ದಾರೆ. ಅವರ ಕೆಲಸದ ಮೇಲಿನ ಶ್ರದ್ಧೆ, ಪ್ರಾಮಾಣಿಕತೆಯು ಜನರ ಹೃದಯ ಗೆದ್ದಿದೆ.