ಕೆಲವರಿಗೆ ಕೈಗಳಲ್ಲಿ ರಕ್ತನಾಳಗಳು ಗೋಚರಿಸುತ್ತವೆ. ಕೈಯಲ್ಲಿ ರಕ್ತನಾಳಗಳ ಹೊರಹೊಮ್ಮುವಿಕೆ ಸಾಮಾನ್ಯ ವಿಷಯ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಕೈಯಲ್ಲಿ ಕಾಣುವ ರಕ್ತನಾಳಗಳು ಸಮಸ್ಯೆ ಉಂಟುಮಾಡಹುದು. ಈ ನರಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅದನ್ನು ನಿರ್ಲಕ್ಷಿಸಬೇಡಿ.
ತೂಕ ಇಳಿಕೆ
ವಿಪರೀತವಾಗಿ ತೂಕ ಕಳೆದುಕೊಳ್ಳುವುದರಿಂದ ಕೈಯಲ್ಲಿ ರಕ್ತನಾಳಗಳು ಗೋಚರಿಸುತ್ತವೆ. ದೇಹದ ತೂಕ ಕಡಿಮೆಯಾದಾಗ ಕೈಯಲ್ಲಿರುವ ಕೊಬ್ಬು ಕೂಡ ಕಡಿಮೆಯಾಗುತ್ತದೆ. ಇದರಿಂದ ರಕ್ತನಾಳಗಳು ಹೊರಹೊಮ್ಮುತ್ತವೆ.
ವ್ಯಾಯಾಮ
ವ್ಯಾಯಾಮ ಮಾಡಿದಾಗ ರಕ್ತ ಪರಿಚಲನೆ ವೇಗವಾಗುತ್ತದೆ. ಇದರಿಂದಾಗಿ ಕೈಗಳ ರಕ್ತನಾಳಗಳು ಗೋಚರಿಸುತ್ತವೆ. ಇದಲ್ಲದೆ ನಾವು ಹೆಚ್ಚು ಭಾರವನ್ನು ಎತ್ತಿದಾಗ, ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಊದಿಕೊಳ್ಳುತ್ತವೆ.
ಆನುವಂಶಿಕ ಕಾರಣ
ನರಗಳ ಊತಕ್ಕೆ ಆನುವಂಶಿಕ ಕಾರಣವೂ ಇರಬಹುದು. ಹೆತ್ತವರು ಅಥವಾ ಕುಟುಂಬದಲ್ಲಿ ಯಾರಿಗಾದರೂ ಈ ರೀತಿ ಇದ್ದರೆ, ನಿಮಗೂ ಕೂಡ ರಕ್ತನಾಳಗಳು ಗೋಚರಿಸುವ ಸಾಧ್ಯತೆ ಇರುತ್ತದೆ.
ವಯಸ್ಸು ಕಾರಣ
ಸಾಮಾನ್ಯವಾಗಿ ಯಂಗ್ ಏಜ್‌ನಲ್ಲಿ ಈ ರೀತಿ ಕೈಗಳಲ್ಲಿ ರಕ್ತನಾಗಳು ಕಾಣಿಸಿಕೊಳ್ಳುವುದಿಲ್ಲ. ವಯಸ್ಸಾದಂತೆ ಕೈಗಳ ರಕ್ತನಾಳಗಳು ಹೊರಹೊಮ್ಮಲು ಪ್ರಾರಂಭಿಸುತ್ತವೆ. ವಯಸ್ಸಾದಂತೆ, ಚರ್ಮವು ತೆಳ್ಳಗಾಗುತ್ತದೆ. ಈ ಕಾರಣದಿಂದಾಗಿ ರಕ್ತನಾಳಗಳು ಕೈಯಲ್ಲಿ ಹೆಚ್ಚು ಗೋಚರಿಸುತ್ತವೆ. ವಯಸ್ಸಾದಂತೆ ರಕ್ತನಾಳಗಳಲ್ಲಿನ ಕವಾಟಗಳು ದುರ್ಬಲವಾಗುತ್ತವೆ, ಇದರಿಂದಾಗಿ ರಕ್ತನಾಳಗಳು ಉಬ್ಬುತ್ತವೆ.