alex Certify ಕೈಕೊಟ್ಟ ಆದಾಯ ತೆರಿಗೆ ಪೋರ್ಟಲ್, ಕೊನೆ ದಿನಾಂಕ ಮಿಸ್ ಆಗುವ ಭಯದಲ್ಲಿ ತೆರಿಗೆದಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಕೊಟ್ಟ ಆದಾಯ ತೆರಿಗೆ ಪೋರ್ಟಲ್, ಕೊನೆ ದಿನಾಂಕ ಮಿಸ್ ಆಗುವ ಭಯದಲ್ಲಿ ತೆರಿಗೆದಾರರು

2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಅಂತಿಮ ದಿನಾಂಕವು ಸಮೀಪಿಸುತ್ತಿದ್ದಂತೆ, ಹಲವಾರು ತೆರಿಗೆದಾರರು ITR ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ.

AY21-22 ಗಾಗಿ ITR ಅನ್ನು ಸಲ್ಲಿಸಲು ಡಿಸೆಂಬರ್ 31 ರ ಡೆಡ್ ಲೈನ್ ಇದೆ. ಈ ಹಿಂದೆ ಕೇಂದ್ರ ಸರ್ಕಾರವು ITR ಭರಿಸಲು, ಅಂತಿಮ ದಿನಾಂಕವನ್ನು ಜುಲೈ 31 ರಿಂದ ಡಿಸೆಂಬರ್ 31 ಕ್ಕೆ ವರ್ಷದ ವಿಸ್ತರಿಸಿತ್ತು. ಆದರೆ, ತೆರಿಗೆ ಸಲ್ಲಿಸುವ ಪೋರ್ಟಲ್ ಪದೇ ಪದೇ ಸ್ಥಗಿತಗೊಳ್ಳುತ್ತಿದೆ ಎಂದು ದೂರಿದ ತೆರಿಗೆದಾರರು ಗಡುವು ದಿನಾಂಕವನ್ನು ಮತ್ತಷ್ಟು ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

#Extend_Due_Date ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಸೋಮವಾರ ಇಡೀ ದಿನ ಟ್ರೆಂಡ್ ಆಗುತ್ತಿತ್ತು. ಏಕೆಂದರೆ ಸಾವಿರಾರು ಜನರು ಈ ಹ್ಯಾಷ್ ಟ್ಯಾಗ್ ಬಳಸಿ ಐಟಿಆರ್ ದಿನಾಂಕ ವಿಸ್ತರಿಸಲು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ‌.

BIG NEWS: 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್​ ಪಡೆಯಲು ಬೇಕಿಲ್ಲ ಕೊಮಿರ್ಬಿಡಿಟಿ ದಾಖಲೆ; ಕೇಂದ್ರದಿಂದ ಮಹತ್ವದ ಘೋಷಣೆ

ಡಿಸೆಂಬರ್ 31ರ ಗಡುವು ನಮಗೋ(ತೆರಿಗೆದಾರರು) ಅಥವಾ ಸಾಫ್ಟ್‌ವೇರ್ ಡೆವಲಪರ್ ಗೋ, ಏಕೆಂದರೆ ತೆರಿಗೆದಾರರಿಗೆ ತೆರಿಗೆ ಭರಿಸಲು ನಿಗದಿತ ಸಮಯಕ್ಕಿಂತ ಕಡಿಮೆ ಸಮಯ ನೀಡಲಾಗಿದೆ. ಆದ್ದರಿಂದ ಈ ಸಂದೇಶ ಬಹುಶಃ ಸಾಫ್ಟ್ ವೇರ್ ಡೆವಲಪರ್ ಗೆ ಇರಬಹುದು ಎಂದು ಸಾಫ್ಟ್ ವೇರ್ ನಲ್ಲಿ ಉಂಟಾಗುತ್ತಿದ್ದ ತೊಂದರೆ ಬಗ್ಗೆ ಟ್ವಿಟ್ಟರ್ ಬಳಕೆದಾರರೊಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಡಿಸೆಂಬರ್ 27 ರವರೆಗೆ ಒಟ್ಟು 4,67,45,249 ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 2021, ಡಿಸೆಂಬರ್ 27 ರವರೆಗೆ ಒಟ್ಟು 4,67,45,249 #ITR ಗಳನ್ನು ಸಲ್ಲಿಸಲಾಗಿದೆ, ಇದರಲ್ಲಿ 15,49,831 ITR ಗಳು 27ನೇ ತಾರೀಖಿನಂದೆ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

ನೀವು ಕೊನೆಯ ದಿನಾಂಕವನ್ನು ಕಳೆದುಕೊಂಡರೆ ಮುಂದೆ ಏನು…?

ನಿಗದಿತ ದಿನಾಂಕವನ್ನು ಕಳೆದುಕೊಂಡಿರುವ ತೆರಿಗೆದಾರರು ತಮ್ಮ ITR ಅನ್ನು ಕೊನೆಯ ದಿನಾಂಕ ಅಥವಾ ಅಂತಿಮ ಗಡುವಿನೊಳಗೆ ಸಲ್ಲಿಸಬಹುದು. FY2020-21 ಗಾಗಿ ITR ಅನ್ನು ಸಲ್ಲಿಸಲು ಡಿಸೆಂಬರ್ 31, 2021 ಅಂತಿಮ ಗಡುವು, ಆದರೆ ಇದಕ್ಕೆ ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ. ಇದರಿಂದ ಪ್ರಸಕ್ತ ವರ್ಷಕ್ಕೆ ಯಾವುದೇ ನಷ್ಟ ಸೇರುವುದಿಲ್ಲ, ಅಥವಾ ಈ ವರ್ಷದ ಆದಾಯದಲ್ಲು ಬದಲಾವಣೆಯಾಗುವುದಿಲ್ಲ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...