ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ ನಡೆಯುತ್ತಿದೆ. ದೊಡ್ಡ ದೊಡ್ಡ ಕಂಪನಿಗಳ ಷೇರು ಮೌಲ್ಯ ಇಳಿಕೆಯಾಗುತ್ತಿದ್ದು, ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ.
ಅದರಲ್ಲೂ ಬಹುನಿರೀಕ್ಷಿತ ಭಾರತೀಯ ಜೀವವಿಮಾ ನಿಗಮದ ಷೇರುಗಳ ಬೆಲೆಯೂ ಇಳಿಕೆಯಾಗಿರುವುದು ಹೂಡಿಕೆದಾರರಲ್ಲಿ ದೊಡ್ಡಮಟ್ಟದ ನಿರಾಸೆಯನ್ನುಂಟು ಮಾಡಿದೆ.
ಇದರ ಮಧ್ಯೆ ದೇಶದ ಬಹುದೊಡ್ಡ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ಶುಕ್ರವಾರದ ಬೆಳಗಿನ ವ್ಯವಹಾರದಲ್ಲಿ ಕೇವಲ 15 ನಿಮಿಷಗಳಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಅವರು ಹೂಡಿಕೆ ಮಾಡಿದ್ದ ಟೈಟಾನ್, ಮೆಟ್ರೋ ಬ್ರಾಂಡ್ ಮತ್ತು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿಗಳ ಷೇರುಗಳ ಬೆಲೆ ಕುಸಿತವಾದ ಕಾರಣ ಈ ನಷ್ಟ ಸಂಭವಿಸಿದೆ.