ವೋಲ್ವೋ ಕಂಪನಿ, ಆಲ್-ಎಲೆಕ್ಟ್ರಿಕ್ SUV EX90 ಅನ್ನು ಪರಿಚಯಿಸಿದೆ. ಇದು ಕಂಪನಿಯ ಪ್ರಮುಖ ಕಾರು. XC40 ರೀಚಾರ್ಜ್ ಮತ್ತು C40 ರೀಚಾರ್ಜ್ ನಂತರ EX90 ವೋಲ್ವೋದ ಮೂರನೇ ವಿದ್ಯುತ್ ಚಾಲಿತ ಮಾದರಿಯಾಗಿದೆ.
ವೋಲ್ವೋ EX90 ಎಲೆಕ್ಟ್ರಿಕ್ SUV 111 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದ್ರೆ 600 ಕಿಮೀ ದೂರ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ. ಸ್ಟ್ಯಾಂಡರ್ಡ್ ಡ್ಯುಯಲ್ ಮೋಟಾರ್ ಸೆಟಪ್ ಇದರ ವಿಶೇಷತೆ. ಮ್ಯಾಕ್ಸ್ ಶ್ರೇಣಿಯ ರೂಪಾಂತರದಲ್ಲಿ, ಮೋಟಾರ್‌ನಿಂದ 408 ಪಿಎಸ್ ಪವರ್ ಔಟ್‌ಪುಟ್ ಲಭ್ಯವಿರುತ್ತದೆ.
ಇದರ ಬ್ಯಾಟರಿ ಪ್ಯಾಕ್ 250 kW ವೇಗದ ಚಾರ್ಜರ್ ಅನ್ನು ಸಪೋರ್ಟ್ ಮಾಡಬಲ್ಲದು. ಅರ್ಧ ಗಂಟೆಯಲ್ಲಿ ಇದನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಈ ಕಾರನ್ನು 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 180 ಕಿ.ಮೀ. ಓಡಿಸಬಹುದು ಅನ್ನೋದು ಮತ್ತೊಂದು ವಿಶೇಷತೆ. ವೋಲ್ವೋದ ಅತ್ಯಂತ ಸುರಕ್ಷಿತ ಕಾರು ಇದು ಎಂದು ಬಣ್ಣಿಸಲಾಗ್ತಾ ಇದೆ. ತ್ಯಂತ ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಲಿಡಾರ್ ವ್ಯವಸ್ಥೆಯನ್ನು ಇದು ಹೊಂದಿದೆ. ಇದು 250 ಮೀಟರ್‌ಗಳ ಪತ್ತೆ ವ್ಯಾಪ್ತಿಯನ್ನು ಹೊಂದಿದೆ.
ಹಲವು ಸೆನ್ಸಾರ್‌ಗಳು, ರಾಡಾರ್‌ಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಿದೆ. ಕಾರಿನ ಒಳಭಾಗದ ವಿನ್ಯಾಸವು ಸರಳವಾಗಿ ಕಾಣಿಸಿದರೂ ಉನ್ನತ ತಂತ್ರಜ್ಞಾನವನ್ನು ಬಳಸಲಾಗಿದೆ. ಅನೇಕ Google Play ಅಪ್ಲಿಕೇಶನ್‌ಗಳು ಮತ್ತು Android ಚಾಲಿತ ಸೇವೆಗಳನ್ನು ಹೊಂದಿರುತ್ತದೆ. ವೋಲ್ವೋದ ಗೂಗಲ್ ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಾರಿನಲ್ಲಿ ಲಭ್ಯವಿರುತ್ತದೆ. SUVಗೆ 5G ಸಂಪರ್ಕವನ್ನೂ ನೀಡಲಾಗಿದೆ. ಸ್ಟೇರಿಂಗ್‌ನಲ್ಲಿ ಟಚ್ ಕಂಟ್ರೋಲ್ ಇರೋದು ಮತ್ತೊಂದು ವಿಶೇಷತೆ.