ಆರ್ಥಿಕ ವ್ಯವಹಾರಗಳಲ್ಲಿ ಪಾನ್ ಕಾರ್ಡ್ ಬಳಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಆಧಾರ್ ಕಾರ್ಡ್ನಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.
ಈ ಪಾನ್ ಕಾರ್ಡ್ ಡಿಜಿಟಲ್ ರೂಪದಲ್ಲಿ ಕೂಡ ಬಳಸಬಹುದು. ಹಾಗೆಯೇ ಆನ್ಲೈನ್ನಲ್ಲಿ ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ.
ಇ-ಪಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ?
ಮೊದಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://www.onlineservices.nsdl.com/paam/requestAndDownloadEPAN.html ಮುಖಪುಟದಲ್ಲಿ, ಎರಡು ಆಯ್ಕೆಗಳು ಕಾಣಿಸುತ್ತವೆ: ಸ್ವೀಕೃತಿ ಸಂಖ್ಯೆ ಅಥವಾ ಪಾನ್. ಒಂದು ಆಯ್ಕೆಯನ್ನು ಕ್ಲಿಕ್ ಮಾಡಿ.
ಪಾನ್ ಆಯ್ಕೆಗಾಗಿ, ನಿಮ್ಮ 10-ಅಂಕಿಯ ಆಲ್ಫಾನ್ಯೂಮರಿಕ್ ಪಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಹುಟ್ಟಿದ ದಿನಾಂಕ, ಜಿ ಎಸ್ ಟಿ ಎನ್ (ಐಚ್ಛಿಕ) ಮತ್ತು ಕ್ಯಾಚೆ ಕೋಡ್ ಅನ್ನು ನಮೂದಿಸಿ.
ಸೂಚನೆಗಳನ್ನು ಓದಿ ಟಿಕ್ ಮಾಡಿ. ಈಗ ಸಬ್ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಇ-ಪಾನ್ ಕಾರ್ಡ್ ಪಿಡಿಎಫ್ ರೂಪದಲ್ಲಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ನಂತರ, ಇ-ಪಾನ್ ಅನ್ನು ತಕ್ಷಣವೇ ಡೌನ್ಲೋಡ್ ಮಾಡಲು ‘ಡೌನ್ಲೋಡ್ ಪಿಡಿಎಫ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇ-ಪಾನ್ ಕಾರ್ಡ್ ನ ಡೌನ್ಲೋಡ್ಗೆ ಅನ್ವಯವಾಗುವ ಶುಲ್ಕ ರೂ. 8.26 ಆಗಿದೆ. ಡೌನ್ಲೋಡ್ ಮಾಡಿದ ಇ-ಪಾನ್ ಕಾರ್ಡ್ ನ ಪಿಡಿಎಫ್ ಪಾಸ್ವರ್ಡ್ ಸುರಕ್ಷಿತವಾಗಿರುತ್ತದೆ. ಅದನ್ನು ಪ್ರವೇಶಿಸಲು, ಬಳಕೆದಾರರು ತಮ್ಮ ಜನ್ಮ ದಿನಾಂಕವನ್ನು ನಮೂದಿಸಬೇಕು, ಅದು ಪಾಸ್ವರ್ಡ್ ರೀತಿ ಕಾರ್ಯನಿರ್ವಹಿಸುತ್ತದೆ.