ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶುಕ್ರವಾರ ರಾಜ್ಯದಲ್ಲಿ 44 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.
ಈ ಮೂಲಕ ಕೇರಳದಲ್ಲಿ ಕೊರೊನಾವೈರಸ್ ರೂಪಾಂತರದ ಒಟ್ಟು ಪ್ರಕರಣಗಳು 107 ಕ್ಕೆ ಏರಿದೆ.
ಈ ವಾರದ ಆರಂಭದಲ್ಲಿ, ರಾಜ್ಯದಲ್ಲಿ 7 ಹೊಸ ಒಮಿಕ್ರಾನ್ ಪ್ರಕರಣಗಳ ವರದಿಯಾಗಿತ್ತು, ಆ ಸಮಯದಲ್ಲಿ, ರಾಜ್ಯದ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 64 ಇತ್ತು. ಏಳು ಪ್ರಕರಣಗಳಲ್ಲಿ, ಪತ್ತನಂತಿಟ್ಟದಲ್ಲಿ ನಾಲ್ಕು, ಆಲಪ್ಪುಳದಲ್ಲಿ ಎರಡು ಮತ್ತು ತಿರುವನಂತಪುರಂನಲ್ಲಿ ಒಂದು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿದು ಬಂದಿದೆ.
ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನೈಟ್ ಕರ್ಪ್ಯೂ ಏರಿದೆ. ಮಾರ್ಗಸೂಚಿಯಲ್ಲಿ, ರಾತ್ರಿ 10 ಗಂಟೆಯ ನಂತರ ಚಲನಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ಆದೇಶ ಹೊರಡಿಸಿದೆ. ಆದರೂ ಕೇರಳದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿನ ಪ್ರಮಾಣದಲ್ಲು ಏರಿಕೆಯಾಗಿದೆ. ಗುರುವಾರ 2,423 ಹೊಸ ಕೊರೋನಾ ಸೋಂಕಿತರು ಹಾಗೂ 164 ಸಾವುಗಳು ವರದಿಯಾಗಿದೆ. ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನದ ಪಾಲನೆ ನಂತರ ಕೇರಳದಲ್ಲಿ ಸಾವಿನ ಸಂಖ್ಯೆ ಏರುತ್ತಿರುವುದು ಆತಂಕಕಾರಿಯಾಗಿದೆ.