ಕೇನ್ಸ್ ಚಲನಚಿತ್ರೋತ್ಸವ ಪ್ರಪಂಚದಾದ್ಯಂತ ಸುದ್ದಿ ಮಾಡ್ತಾ ಇದೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸುಂದರ ತಾರೆಯರ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಐಶ್ವರ್ಯ ರೈ, ದೀಪಿಕಾ ಪಡುಕೋಣೆಯಿಂದ ಹಿಡಿದು ಭಾರತೀಯ ಚಿತ್ರರಂಗದ ಬಹುತೇಕ ಜನಪ್ರಿಯ ನಟಿಯರೆಲ್ಲ ಕೇನ್ಸ್ನಲ್ಲಿ ಹೆಜ್ಜೆ ಹಾಕಿದ್ದಾರೆ.
ಇವರೆಲ್ಲರ ನಡುವೆಯೇ ಯುವತಿಯೊಬ್ಬಳು ವಿಚಿತ್ರ ಕಾರಣಕ್ಕೆ ಕೇನ್ಸ್ನಲ್ಲಿ ಸುದ್ದಿ ಮಾಡಿದ್ದಾಳೆ. ಎಲ್ಲಾ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಕ್ಯಾಟ್ ವಾಕ್ ಮಾಡ್ತಿದ್ರೆ ಯುವತಿಯೊಬ್ಬಳು ಟಾಪ್ ಲೆಸ್ ಆಗಿ ಎಂಟ್ರಿ ಕೊಟ್ಟಿದ್ದಾಳೆ. ಕೂಗಾಡುತ್ತ ರೆಡ್ ಕಾರ್ಪೆಟ್ ಮೇಲೆ ಓಡಿದ್ದಾಳೆ.
ಎಲ್ಲರ ಕಣ್ಣುಗಳೂ ಆ ಯುವತಿಯತ್ತ ನೆಟ್ಟಿದ್ದವು. ಆಕೆ ಟಾಪ್ಲೆಸ್ ಆಗಿದ್ದಿದ್ದರಿಂದ ಅಲ್ಲಿ ನೆರೆದಿದ್ದವರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ. ಆಕೆ ಉಕ್ರೇನ್ ಮೂಲದ ಯುವತಿ. ಯುದ್ಧದ ಸಂದರ್ಭದಲ್ಲಿ ರಷ್ಯಾ ಯೋಧರು ಉಕ್ರೇನ್ ಮಹಿಳೆಯರ ಮೇಲೆ ನಡೆಸ್ತಿರೋ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆಗಿಳಿದಿದ್ದಳು.
ತನ್ನ ಎದೆಯ ಮೇಲೆ ಅತ್ಯಾಚಾರ ನಿಲ್ಲಿಸಿ ಎಂಬ ಬರಹವನ್ನು ಚಿತ್ರಿಸಿಕೊಂಡು ಟಾಪ್ಲೆಸ್ ಆಗಿ ಬಂದಿದ್ದಾಳೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಲಕ್ಷಾಂತರ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಈಕೆ ಆರೋಪಿಸಿದ್ದಾಳೆ. ಯುವತಿಯ ಫೋಟೋ ಮತ್ತು ವಿಡಿಯೋಗಳು ಈಗ ವೈರಲ್ ಆಗ್ತಿವೆ. ಪ್ರತಿಭಟನೆಗಿಳಿದಿದ್ದ ಯುವತಿಯನ್ನು ಕವರ್ ಮಾಡಿಕೊಂಡು ಭದ್ರತಾ ಸಿಬ್ಬಂದಿ ಅಲ್ಲಿಂದ ಕರೆದೊಯ್ದಿದ್ದಾರೆ.