alex Certify ಕೇದಾರನಾಥದಲ್ಲಿ ಎಲ್ಲಿ ನೋಡಿದ್ರೂ ಬಿದ್ದಿರೋ ರಾಶಿ-ರಾಶಿ ಕಸ: 2013ರ ದುರಂತ ಎಚ್ಚರಿಸಿದ ತಜ್ಞರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇದಾರನಾಥದಲ್ಲಿ ಎಲ್ಲಿ ನೋಡಿದ್ರೂ ಬಿದ್ದಿರೋ ರಾಶಿ-ರಾಶಿ ಕಸ: 2013ರ ದುರಂತ ಎಚ್ಚರಿಸಿದ ತಜ್ಞರು

ಡೆಹ್ರಾಡೂನ್: ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭಾಗವಹಿಸುತ್ತಿದ್ದು, ಕೇದಾರನಾಥಕ್ಕೆ ತೆರಳುವ ಧಾರ್ಮಿಕ ಮಾರ್ಗವು ಕಸದ ರಾಶಿಯಾಗಿ ಮಾರ್ಪಟ್ಟಿದೆ. ಚಿತ್ರದಲ್ಲಿ, ಕೇದಾರನಾಥಕ್ಕೆ ಹೋಗುವ ಹಾದಿಯಲ್ಲಿ ಪ್ರವಾಸಿಗರಿಗಾಗಿ ಸ್ಥಾಪಿಸಲಾದ ಟೆಂಟ್‌ಗಳ ಸಾಲಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿಗಳನ್ನು ಕಾಣಬಹುದು.

ಈ ದೃಶ್ಯಗಳು ಪರಿಸರವಾದಿಗಳ ಕಳವಳವನ್ನು ಹೆಚ್ಚಿಸಿದರೆ, ಸಾರ್ವಜನಿಕರನ್ನು ಕೂಡ ಕೆರಳಿಸಿದೆ. ಕಸ ಹಾಕುವ ಸಮಸ್ಯೆಯನ್ನು ನಿಭಾಯಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಗಂಭೀರ ಪರಿಸರ ಸಮಸ್ಯೆ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, 2013ರ ದುರಂತದ ಬಗ್ಗೆ ಕೂಡ ಅವರು ಗಂಭೀರವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಹಿಮಾಲಯದ ಎತ್ತರದ ಪ್ರದೇಶಗಳ ಹವಾಮಾನ ಬದಲಾವಣೆ ಮತ್ತು ಗಿಡಮೂಲಿಕೆಗಳ ಕುರಿತು ಸಂಶೋಧನೆ ನಡೆಸಿರುವ ಹೈಯರ್ ಪ್ಲಾಂಟ್ ಹಿಮಾಲಯನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎಚ್‌ಎಪಿಆರ್‌ಇಸಿ) ನಿರ್ದೇಶಕ ಪ್ರೊಫೆಸರ್ ಎಂಸಿ ನೌಟಿಯಾ, ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದಲ್ಲದೆ, ಕಸ ವಿಲೇವಾರಿ ಸರಿಯಾಗಿ ಇಲ್ಲದಿರುವುದರಿಂದ ಈ ಸಮಸ್ಯೆ ತಲೆದೋರಿದೆ. ಇದರಿಂದ ನೈಸರ್ಗಿಕ ಸಸ್ಯವರ್ಗದ ಮೇಲೆ ಪರಿಣಾಮ ಬೀರಿದ್ದು, ಔಷಧೀಯ ಸಸ್ಯಗಳೂ ನಶಿಸಿ ಹೋಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇದಾರನಾಥದಂತಹ ಸೂಕ್ಷ್ಮ ಸ್ಥಳದಲ್ಲಿ ಪ್ಲಾಸ್ಟಿಕ್ ಕಸದ ರಾಶಿಯು ಪರಿಸರ ವಿಜ್ಞಾನಕ್ಕೆ ಅಪಾಯಕಾರಿಯಾಗಿದೆ. ಇದು ಭೂಕುಸಿತವನ್ನು ಉಂಟುಮಾಡುವ ಸವೆತಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

2013 ರಲ್ಲಿ ಗುಡ್ಡಗಾಡು ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾದ ವಿನಾಶಕಾರಿ ಮೇಘಸ್ಫೋಟವನ್ನು ಕೆಲವು ಬಳಕೆದಾರರು ನೆನಪಿಸಿಕೊಂಡಿದ್ದಾರೆ. ಯಾತ್ರಾರ್ಥಿಗಳಲ್ಲಿ ಪರಿಸರವನ್ನು ಕಾಪಾಡುವಂತೆ ಒತ್ತಾಯಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ಕಳೆದ ಎರಡು ವರ್ಷಗಳಿಂದ ಮುಚ್ಚಲಾಗಿತ್ತು. ಈ ವರ್ಷ ಅಕ್ಷಯ ತೃತೀಯ ಸಂದರ್ಭದಲ್ಲಿ ಮತ್ತೆ ಯಾತ್ರೆ ಆರಂಭಿಸಲಾಗಿದೆ. ವರದಿಗಳ ಪ್ರಕಾರ, ಮೇ 3 ರಿಂದ ಉತ್ತರಾಖಂಡದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ ಯಾತ್ರೆಯನ್ನು ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...