ಜೂನ್ 2022 ರ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (IGCSE) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ವಿಶ್ವಕ್ಕೇ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ನಿಧಿ ಅಯ್ಯಂಗಾರ್ (ಜೀವಶಾಸ್ತ್ರ ಮತ್ತು ಹೆಚ್ಚುವರಿ ಗಣಿತ) ಹಾಗೂ ರೋಹನ್ ಕಿಶೋರ್ ಜೋಶಿ (ಹೆಚ್ಚುವರಿ ಗಣಿತ) ಇಬ್ಬರೂ ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳು. ಇಡೀ ಜಗತ್ತಿಗೇ ಟಾಪರ್‌ಗಳಾಗಿ ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಇನ್ನೂ ಹಲವು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಪಾಸ್ ಆಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಎದುರಾಗಿದ್ದ ಕೊರೊನಾ ಸವಾಲಿನ ನಡುವೆಯೂ ವಿದ್ಯಾರ್ಥಿಗಳು ಪರಿಶ್ರಮಪಟ್ಟು ಉತ್ತಮ ಫಲಿತಾಂಶ ತಂದಿರೋದು ಶಾಲಾ ಆಡಳಿತ ಮಂಡಳಿಗೆ ಖುಷಿಕೊಟ್ಟಿದೆ.
ಜೂನ್ ತಿಂಗಳಿನಲ್ಲಿ ನಡೆದ ಈ ಪರೀಕ್ಷೆಯಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಒಟ್ಟು 5 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾರತದ 8000 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. 147 ದೇಶಗಳ ವಿದ್ಯಾರ್ಥಿಗಳು ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಗಣಿತ, ಇಂಗ್ಲಿಷ್, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ, ಕೇಂಬ್ರಿಡ್ಜ್ IGCSE ಯ ಪ್ರಮುಖ ವಿಷಯಗಳು.