alex Certify ಕೇಂದ್ರ ಸರ್ಕಾರಿ ನೌಕರರು ತೆರಿಗೆ ವಿನಾಯಿತಿ ಪಡೆಯಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರು ತೆರಿಗೆ ವಿನಾಯಿತಿ ಪಡೆಯಲು ಇಲ್ಲಿದೆ ಟಿಪ್ಸ್

7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನದ ಬಾಕಿಯನ್ನು ಹೊಂದಿರುವ ಕೇಂದ್ರ ಸರ್ಕಾರಿ ನೌಕರರು ಆದಾಯ ತೆರಿಗೆಯ ಸೆಕ್ಷನ್ 89ರ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಯಾವುದಾದರೂ ಫಾರ್ಮ್‌ ಸಲ್ಲಿಸಬೇಕೇ ಎಂಬ ಪ್ರಶ್ನೆ ಬಹಳಷ್ಟು ಜನರಲ್ಲಿದೆ. ತೆರಿಗೆ ನಿಯಮಗಳ ಪ್ರಕಾರ, ಸೆಕ್ಷನ್ 80ರ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಸರ್ಕಾರಿ ನೌಕರರು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಫಾರ್ಮ್ 10E ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಫಾರ್ಮ್ 10E ಅನ್ನು ಸಲ್ಲಿಸದೆಯೇ ಸೆಕ್ಷನ್ 89ರ ಅಡಿಯಲ್ಲಿ ಪರಿಹಾರವನ್ನು ಕ್ಲೈಮ್ ಮಾಡಿದರೆ, ಆದಾಯ ತೆರಿಗೆ ಇಲಾಖೆಯಿಂದ “ಆನ್‌ಲೈನ್ ಫಾರ್ಮ್ 10E ಅನ್ನು ಸಲ್ಲಿಸದ ಕಾರಣ ನಿಮ್ಮ ಪ್ರಕರಣದಲ್ಲಿ ಸೆಕ್ಷನ್ 89ರ ಅಡಿಯಲ್ಲಿ ಪರಿಹಾರವನ್ನು ಅನುಮತಿಸಲಾಗಿಲ್ಲ” ಎಂಬ ಸೂಚನೆ ಬರಬಹುದು. ಆದ್ದರಿಂದ  ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ನೀವು ಫಾರ್ಮ್ 10E ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ಅಗತ್ಯವಿದೆ.

ಫಾರ್ಮ್ 10E ಸಲ್ಲಿಕೆ ಹೇಗೆ?

ಸರ್ಕಾರಿ ನೌಕರರು ಈ ಕೆಳಗೆ-ಸೂಚಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ಫಾರ್ಮ್ 10E ಅನ್ನು ಸಲ್ಲಿಸಬಹುದು:

ಹಂತ 1: http://www.incometax.gov.in ಗೆ ಲಾಗಿನ್ ಮಾಡಿ.

ಹಂತ 2: ನೀವು ಲಾಗ್ ಇನ್ ಮಾಡಿದ ನಂತರ, ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಇ-ಫೈಲ್ > ಆದಾಯ ತೆರಿಗೆ ಫಾರ್ಮ್ಸ್ > ಫೈಲ್ ಇನ್ಕಮ್ ಟ್ಯಾಕ್ಸ್ ಫಾರ್ಮ್ಸ್. ಲ್ಯಾಂಡಿಂಗ್ ಪುಟದಲ್ಲಿ, ಆಯ್ಕೆಯನ್ನು ಆರಿಸಿ: “ತೆರಿಗೆ ವಿನಾಯಿತಿ ಮತ್ತು ಪರಿಹಾರಗಳು/ಫಾರ್ಮ್ 10E) 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ತಮ್ಮ ಪಾವತಿಗಳನ್ನು (ಸಂಬಳ, ಪಿಂಚಣಿ, ಭತ್ಯೆಗಳು ಇತ್ಯಾದಿ) ಸ್ವೀಕರಿಸುತ್ತಾರೆ. ಎಲ್ಲಾ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಐಟಿಆರ್‌ ಸಲ್ಲಿಸಲು 31 ಕೊನೆಯ ದಿನಾಂಕವಾಗಿತ್ತು. ಈ ಗಡುವಿನ ದಿನಾಂಕದೊಳಗೆ 5.8 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ!

7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ಮಾಡಿದ ಪಾವತಿಗಳ ಪರಿಷ್ಕರಣೆಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದು ಸರ್ಕಾರ ಹೇಳಿದೆ. ಈ ನಿರ್ದಿಷ್ಟ ಉದ್ದೇಶಕ್ಕಾಗಿ ಮತ್ತೊಂದು ವೇತನ ಆಯೋಗದ ರಚನೆಯು ಅಗತ್ಯವಿಲ್ಲದಿರಬಹುದು. ಆದಾಗ್ಯೂ, ಭವಿಷ್ಯದಲ್ಲಿ 8ನೇ ಕೇಂದ್ರ ವೇತನ ಆಯೋಗ ಇರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಿದೆ ಸರ್ಕಾರ. ಈ ಮಧ್ಯೆ ಕೇಂದ್ರ ಸರ್ಕಾರಿ ನೌಕರರು ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ತುಟ್ಟಿಭತ್ಯೆ ದರದಲ್ಲಿ ಮತ್ತೊಂದು ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...