5ನೇ ಕೇಂದ್ರ ವೇತನ ಆಯೋಗ ಹಾಗೂ ಆರನೇ ಕೇಂದ್ರ ವೇತನ ಆಯೋಗದ ಪರಿಷ್ಕೃತ ಶ್ರೇಣಿಯಲ್ಲಿ ತಮ್ಮ ವೇತನವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ವಿಚಾರದಲ್ಲಿ ಶುಭ ಸುದ್ದಿಯೊಂದು ಸಿಕ್ಕಿದೆ. ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಹಾಗೂ ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ.
ಪೂರ್ವ ಪರಿಷ್ಕೃತ ವೇತನ ಶ್ರೇಣಿ ಅಥವಾ 5ನೇ CPC ಯ ದರ್ಜೆಯ ವೇತನದಲ್ಲಿ ತಮ್ಮ ವೇತನವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರವು DA ಯನ್ನು ಈಗಿರುವ 368% ರಿಂದ 381% ಕ್ಕೆ ಏರಿಸಿದೆ. ಪೂರ್ವ ಪರಿಷ್ಕೃತ 6ನೇ CPC ವೇತನ ಶ್ರೇಣಿ ಅಥವಾ ದರ್ಜೆಯ ವೇತನದಲ್ಲಿ ತಮ್ಮ ವೇತನವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರವು ಅವರ ಡಿಎಯನ್ನು 196% ರಿಂದ 203% ಕ್ಕೆ ಏರಿಸಿದೆ. ಈ ಪರಿಷ್ಕೃತ ತುಟ್ಟಿ ಭತ್ಯೆಯು 2022ರ ಜನವರಿ 1ರಿಂದ ಪೂರ್ವಾನ್ವಯವಾಗಲಿದೆ ಎಂದು ಹಣಕಾಸು ಸಚಿವಾಲಯವು ಹೇಳಿದೆ.
6 ನೇ CPC ಯ ಪೂರ್ವ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ DA ಹೆಚ್ಚಳದ ಕುರಿತು ಪ್ರಕಟಿಸಲಾದ ಮೆಮೊರಂಡಂನಲ್ಲಿ ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ .