alex Certify ಕೇಂದ್ರ ಸರ್ಕಾರದಿಂದ ಸ್ವಚ್ಛತಾ ಅಭಿಯಾನ 2.0: ಸ್ಕ್ರ್ಯಾಪ್‌ ಮಾರಾಟದಿಂದ್ಲೇ ಬಂತು 254 ಕೋಟಿ ಆದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದಿಂದ ಸ್ವಚ್ಛತಾ ಅಭಿಯಾನ 2.0: ಸ್ಕ್ರ್ಯಾಪ್‌ ಮಾರಾಟದಿಂದ್ಲೇ ಬಂತು 254 ಕೋಟಿ ಆದಾಯ

ಬೇಡದ ಚಿಂದಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ 254 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ. ಅಷ್ಟೇ ಅಲ್ಲ ಸ್ಕ್ರ್ಯಾಪ್‌ ಮಾರಾಟದಿಂದಾಗಿ ಸುಮಾರು 37 ಲಕ್ಷ ಚದರ ಅಡಿ ಜಾಗ ಕೂಡ ತೆರವಾಗಿದೆ.

ಈ ವಿಶೇಷ ಸ್ವಚ್ಛತಾ ಅಭಿಯಾನ 2.0 ಅನ್ನು ಅಕ್ಟೋಬರ್ 2 ರಂದು ಪ್ರಾರಂಭಿಸಲಾಯಿತು. ಸ್ಕ್ರ್ಯಾಪ್ ವಿಲೇವಾರಿ ಮತ್ತು ಸರ್ಕಾರದ  ಬಾಕಿಯನ್ನು ಕಡಿಮೆ ಮಾಡುವುದು ಸೇರಿದಂತೆ ಅನೇಕ ಸದುದ್ದೇಶಗಳನ್ನೊಳಗೊಂಡ ಯೋಜನೆ ಇದು. ಅಕ್ಟೋಬರ್ 31 ರಂದು ಈ ಅಭಿಯಾನ ಮುಕ್ತಾಯಗೊಳ್ಳಲಿದೆ. ಇದರಲ್ಲಿ ಕೇಂದ್ರ ಸರ್ಕಾರದ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಭಾಗವಹಿಸಿದ್ದವು.

ಒಟ್ಟಾರೆ 40 ಲಕ್ಷ ಕಡತಗಳನ್ನು ಪರಿಶೀಲಿಸಲಾಗಿದೆ. 3 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಕುಂದು ಕೊರತೆಗಳನ್ನು ಪರಿಹರಿಸಲಾಗಿದೆ. ಸಂಸದರ 5,416 ಉಲ್ಲೇಖಗಳಿಗೆ ಪ್ರತಿಕ್ರಿಯಿಸಲಾಗಿದೆ. ಪ್ರಚಾರ ಪ್ರಾರಂಭವಾದಾಗಿನಿಂದ 588 ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಸಚಿವಾಲಯಗಳು/ಇಲಾಖೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಬಾಕಿಯನ್ನು ಕಡಿಮೆ ಮಾಡಲು ಈ ಯೋಜನೆ ಉದ್ದೇಶಿಸಿದೆ. ಸ್ಕ್ರ್ಯಾಪ್ ವಿಲೇವಾರಿಯಿಂದ ಇದುವರೆಗೆ 254.21 ಕೋಟಿ ಆದಾಯ ಬಂದಿರುವುದಾಗಿ ಖುದ್ದು ಸಚಿವರೇ ಮಾಹಿತಿ ನೀಡಿದ್ದಾರೆ.

ಸ್ವಚ್ಛತಾ ಅಭಿಯಾನದ ಪರಿಣಾಮವು ಗೋಚರಿಸುತ್ತಿದೆ ಎಂದು ಒತ್ತಿ ಹೇಳಿದ ಸಚಿವರು, ಈ ಅಭಿಯಾನ ನಡವಳಿಕೆಯ ಬದಲಾವಣೆಯನ್ನು ಹುಟ್ಟುಹಾಕಿದೆ ಮತ್ತು ಆಡಳಿತದಲ್ಲಿ ಹೊಸತನಕ್ಕೆ ಕಾರಣವಾಗಿದೆ ಎಂದರು.  ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಕೇಂದ್ರ  ಸರ್ಕಾರದ ಕಾರ್ಯದರ್ಶಿಗಳು ವಿಶೇಷ ಅಭಿಯಾನ 2.0 ನಲ್ಲಿ ಭಾಗವಹಿಸಿದ್ದರು. ಇವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಭಾಗವಹಿಸಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಮಾತನಾಡಿ, ಪ್ರಚಾರದ ಭಾಗವಾಗಿ ತಮ್ಮ ಇಲಾಖೆಯಲ್ಲಿ ಕೈಗೊಂಡ ಉಪಕ್ರಮಗಳನ್ನು ಹಂಚಿಕೊಂಡರು. ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತುಗಳ ಅನುದಾನ ಮತ್ತು ಅವುಗಳ ಬಿಲ್ಲಿಂಗ್ ಪ್ರಕ್ರಿಯೆಗೆ ಎಲೆಕ್ಟ್ರಾನಿಕ್ ಬಿಲ್ಲಿಂಗ್ ವ್ಯವಸ್ಥೆಯನ್ನು (ಇ-ಬಿಲ್ಲಿಂಗ್) ವರ್ಷಾಂತ್ಯದೊಳಗೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಕಳೆದ ವರ್ಷ ಸುಮಾರು 7.3 ಲಕ್ಷ ಕಡತಗಳನ್ನು ತೆಗೆಯುವ ಮೂಲಕ ಸರ್ಕಾರಿ ಕಚೇರಿಗಳಲ್ಲಿ 3.18 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...