alex Certify ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್..? ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಸತ್ಯಾಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್..? ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಸತ್ಯಾಂಶ

ಕೊರೊನಾ ವೈರಸ್​ ಸಾಂಕ್ರಾಮಿಕ ಹೆಚ್ಚಿದಂತೆಲ್ಲ ದೇಶದಲ್ಲಿ ಶಾಲಾ – ಕಾಲೇಜುಗಳು ಆನ್​ಲೈನ್​ ತರಗತಿಗಳತ್ತ ಮುಖ ಮಾಡಿದ್ದವು. ಹೀಗಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ಅಥವಾ ಮೊಬೈಲ್​ಗಳು ಅವಶ್ಯಕವಾಗಿದೆ.

ಈ ನಡುವೆ ಪ್ರಧಾನಮಂತ್ರಿ ಲ್ಯಾಪ್​ಟಾಪ್ ವಿತರಣಾ ಯೋಜನೆ 2022ರ ಅಡಿಯಲ್ಲಿ ಕೇಂದ್ರ ಸರ್ಕಾರವು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಲ್ಯಾಪ್​​ಟಾಪ್​ಗಳನ್ನು ಉಚಿತವಾಗಿ ಒದಗಿಸುತ್ತಿದೆ ಎಂಬ ವಿಚಾರವು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಧಾನಿ ಮೋದಿ ಭಾವಚಿತ್ರ ಸಮೇತ ಈ ಸಂದೇಶವು ಎಲ್ಲೆಡೆ ವೈರಲ್​ ಆಗಿದೆ. ಅಲ್ಲದೇ ಇದರ ಜೊತೆಯಲ್ಲಿ ಒಂದು ಲಿಂಕ್​ ಕೂಡ ನೀಡಲಾಗಿದ್ದು, ಇಲ್ಲಿ ಉಚಿತ ಲ್ಯಾಪ್​ಟಾಪ್​​ಗಾಗಿ ನೋಂದಣಿ ಮಾಡಿಕೊಳ್ಳಿ ಎಂದು ಹೇಳಲಾಗಿದೆ.

ಈ ವಿಚಾರವು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ಬಳಿಕ ಪ್ರೆಸ್​ ಇನ್ಫಾರ್ಮೇಷನ್​​ ಬ್ಯೂರೋ ಫ್ಯಾಕ್ಟ್​ ಚೆಕ್​ ಮಾಡಿದೆ. ಈ ಫ್ಯಾಕ್ಟ್​​ ಚೆಕ್​ನಲ್ಲಿ ಕೇಂದ್ರ ಸರ್ಕಾರವು ಇಂತಹ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಎಂಬ ವಿಚಾರವು ತಿಳಿದು ಬಂದಿದೆ.

ಪ್ರಧಾನ ಮಂತ್ರಿ ಲ್ಯಾಪ್​ಟಾಪ್​ ಹಂಚಿಕೆ ಯೋಜನೆ 2022ರ ಅಡಿಯಲ್ಲಿ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ನೀಡಲಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಕೇಂದ್ರ ಸರ್ಕಾರವು ಇಂತಹ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದು ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...