alex Certify ಕೆ.ಜಿ. ಗೋಧಿ ಬೆಲೆ 1.6 ರೂಪಾಯಿ: ಟ್ವಿಟರ್​ನಲ್ಲಿ ಸದ್ದು ಮಾಡ್ತಿದೆ ಈ ಬಿಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಜಿ. ಗೋಧಿ ಬೆಲೆ 1.6 ರೂಪಾಯಿ: ಟ್ವಿಟರ್​ನಲ್ಲಿ ಸದ್ದು ಮಾಡ್ತಿದೆ ಈ ಬಿಲ್​

ಹಿಂದಿನ ಕಾಲವೇ ಎಷ್ಟು ಚೆನ್ನಾಗಿತ್ತು ಎಂದು ಹೇಳುವವರಿಗೇನೂ ಕಮ್ಮಿ ಇಲ್ಲ. ಆದ್ದರಿಂದ ತಮ್ಮ ಖಜಾನೆಯಲ್ಲಿರುವ ಹಳೆಯ ಬಿಲ್ಲುಗಳನ್ನು ತೆಗೆದು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳಲಾಗುತ್ತಿದೆ. ಅಂಥದ್ದೇ ಒಂದು ಬಿಲ್​ ಈಗ ವೈರಲ್​ ಆಗಿದೆ.

1987 ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ ಇದಾಗಿದೆ. ಆ ಸಮಯದಲ್ಲಿ ಗೋಧಿಯ ಬೆಲೆ ಎಷ್ಟು ಇತ್ತು ಎಂದು ನೆಟ್ಟಿಗರೊಬ್ಬರು ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಅಜ್ಜನ “ಜೆ ಫಾರ್ಮ್” ಬಿಲ್ (ಧಾನ್ಯ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳ ಮಾರಾಟದ ರಶೀದಿಯಾಗಿದೆ) ಟ್ವಿಟರ್​​​ ಮೂಲಕ ಹಂಚಿಕೊಂಡಿದ್ದಾರೆ. ಇದರಲ್ಲಿ 1987ರಲ್ಲಿ ಒಂದು ಕೆಜಿ ಗೋಧಿಗೆ 1.6 ರೂಪಾಯಿ ಇತ್ತು ಎಂದು ತೋರಿಸುತ್ತದೆ.

ಅಜ್ಜನ ಕಾಲದಲ್ಲಿ ಒಂದು ಕೆ.ಜಿ. ಗೋಧಿ ಬೆಲೆ 1.6 ರೂಪಾಯಿ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ ಮಾಡಿದ ಗೋಧಿ ಬೆಳೆ ಬಿಲ್​​ ಇದು. ಅವರಿಗೆ ಎಲ್ಲಾ ದಾಖಲೆಗಳನ್ನು ಹಾಗೆಯೇ ಸಂಗ್ರಹ ಮಾಡಿ ಇಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಅಧಿಕಾರಿ ಬರೆದುಕೊಂಡಿದ್ದಾರೆ.

ಇದಕ್ಕೆ ಹಲವರು ವಿಭಿನ್ನ ರೀತಿಯ ಕಮೆಂಟ್​ ಮಾಡಿದ್ದಾರೆ. ಅಂದು ಇಷ್ಟು ಕಡಿಮೆ ರೇಟ್​ ಇದ್ದಿರಬಹುದು. ಆದರೆ ಅಂದು ಆದಾಯ ಕೂಡ ಅಷ್ಟೇ ಇತ್ತು ಎಂದು ಹಲವರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...