alex Certify ಕೆ.ಜಿ.ಎಫ್ – 2 ಇನ್ನೂ ನೋಡಿಲ್ವಾ…? ಹಾಗಾದ್ರೆ ಇಲ್ಲಿ ಸಿಗ್ತಿದೆ ವೀಕ್ಷಣೆಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಜಿ.ಎಫ್ – 2 ಇನ್ನೂ ನೋಡಿಲ್ವಾ…? ಹಾಗಾದ್ರೆ ಇಲ್ಲಿ ಸಿಗ್ತಿದೆ ವೀಕ್ಷಣೆಗೆ ಅವಕಾಶ

ರಾಕಿಭಾಯ್ ಎಲ್ಲ ಭಾಷೆಗಳಲ್ಲೂ ಧೂಳು ಎಬ್ಬಿಸಿದ್ದಾಗಿದೆ. ಇಂದಿಗೂ ಎಷ್ಟೋ ಥೇಟರ್‌ಗಳಲ್ಲಿ ಕೆ.ಜಿ.ಎಫ್-2 ಹೌಸ್‌ಫುಲ್‌ ಆಗಿ ಓಡ್ತಿದೆ. ಈಗಾಗಲೇ ಕೆ.ಜಿ.ಎಫ್-2ಗೆ ಬಾಕ್ಸ್ಆಫೀಸ್‌ನಲ್ಲೇ ಸರ್ವಕಾಲಿಕ ಹಿಟ್ ಅನ್ನೋ ಕ್ರೆಡಿಟ್ ಕೂಡಾ ಕೊಟ್ಟಿದ್ದಾಗಿದೆ. ಈಗ ಇದೇ ಕೆ.ಜಿ.ಎಫ್‌. ರಾಕಿಭಾಯ್‌ನ ರಫ್ ಎಂಡ್‌ ಟಫ್ ಲುಕ್‌ ಈಗ ನಿಮ್ಮ ಮನೆಯಲ್ಲೇ ಕುಳಿತು ಎಂಜಾಯ್ ಮಾಡ್ಬಹುದಾಗಿದೆ.

ಇದೇ ಜೂನ್ 3ರಂದು ಅಮೆಜಾನ್ ಪ್ರೈಮ್‌ಲ್ಲಿ ಕೆ.ಜಿ.ಎಫ್-2 ವೀಕ್ಷಿಸಬಹುದಾಗಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಮನೆಯಲ್ಲಿಯೇ ಕುಳಿತು ಸಿನೆಮಾ ನೋಡಬಹುದಾಗಿದೆ. ಕನ್ನಡ, ಹಿಂದಿ, ತಮಿಳು, ತೆಲಗು ಮತ್ತು ಮಲೆಯಾಳಂ ಈ 5 ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಅಶ್ಲೀಲ ವಿಡಿಯೋ ಪ್ರಕರಣ: ಸಂಕಷ್ಟಕ್ಕೆ ಸಿಲುಕಿದ ನಟಿ ಪೂನಂ ಪಾಂಡೆ

ಪ್ರಶಾಂತ್ ನೀಲ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್, ಪ್ರಕಾಶ್‌ರಾಜ್‌, ರಾವ್ ರಮೇಶ್, ಈಶ್ವರಿ ರಾವ್, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...