
6 ವರ್ಷದ ಬಾಲಕನೊಬ್ಬ ಮುಚ್ಚದೇ ಇರುವ ಕೆಸರು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಆಘತಾಕರಿ ಘಟನೆ ರಾಜಸ್ಥಾನದ ಜೈಪುರ ನಗರದ ತರಕಾರಿ ಮತ್ತು ಹಣ್ಣುಗಳ ಸಗಟು ಮಾರುಕಟ್ಟೆ ಮುಹನ ಮಂಡಿಯಲ್ಲಿ, ಸೋಮವಾರ ನಡೆದಿದೆ.
ಸಂಜೆ ವೇಳೆಯಲ್ಲಿ ಘಟನೆ ನಡೆದಿದ್ದು, ನಾಗರಿಕ ರಕ್ಷಣಾ ತಂಡ ಬಾಲಕನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ತಕ್ಷಣ ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ಮೃತ ಬಾಲಕನನ್ನು ಶೇಖರ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆಯೆಂದು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಗುಂಡಿಗಳ ನಿರ್ವಹಣೆ ಮಾಡುವುದು ಯಾರ ಜವಾಬ್ದಾರಿ, ಅದನ್ನು ತೆರೆದು ಬಿಟ್ಟಿರುವುದೇಕೆ ಎಂದು ತನಿಖೆ ನಡೆಸುತ್ತಿದ್ದಾರೆ.
ಪ್ರತಿದಿನ ರಾತ್ರಿ ಮೊಸರು ತಿಂತೀರಾ..? ಇದನ್ನೊಮ್ಮೆ ಓದಿ
ಹುಡುಗ ಕೆಸರು ಗುಂಡಿಗೆ ಬಿದ್ದ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಈ ಬಗ್ಗೆ ನಾಗರಿಕ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದರು. ಪೊಲೀಸ್ ಹಾಗೂ ಎರಡೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ಕೈಗೊಂಡರು. ಅದು ಕೆಸರು ಗುಂಡಿಯಾಗಿದ್ದರಿಂದ ಹುಡುಗನನ್ನು ರಕ್ಷಿಸಲು ಇಡೀ ಟ್ಯಾಂಕ್ ಒಣಗಿಸುವ ಅಗತ್ಯ ಬಿದ್ದಿತು. ಯಂತ್ರಗಳ ಸಹಾಯದಿಂದ ಕೆಸರನ್ನು ಪಂಪ್ ಮಾಡಲಾಯ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕ್ ಒಣಗಿದ ನಂತರ, ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ. ನಂತರ, ನಮ್ಮ ಸ್ವಯಂಸೇವಕ ತಂಡ ಹುಡುಗನನ್ನು ಹೊರತೆಗೆದರು. ಹೊರಗೆ ಎಳೆದಾಗ ಆತ ಉಸಿರಾಡುತ್ತಿರಲಿಲ್ಲ. ಅವನನ್ನು ತಕ್ಷಣವೇ ಜೈಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವನು ಸತ್ತಿರುವುದನ್ನ ವೈದ್ಯರು ಖಚಿತಪಡಿಸಿದರು, ಎಂದು ಸಿವಿಲ್ ಡಿಫೆನ್ಸ್‌ನ ಸ್ವಯಂಸೇವಕ ಮಹೇಂದ್ರ ಸೆವ್ದಾ ಮಾಹಿತಿ ಹಂಚಿಕೊಂಡಿದ್ದಾರೆ.