ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ಕಾರಣಕ್ಕೆ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಶುಕ್ರವಾರದಂದು ಕೆಲ ಗಂಟೆಗಳ ಅವಧಿಗೆ ಎರಡನೇ ಸ್ಥಾನಕ್ಕೆ ಏರಿದ್ದರು.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಹಾಗೂ ಫ್ರಾನ್ಸ್ ನ ಬರ್ನಾರ್ಡ್ ಅರ್ನಾಲ್ಡ್ ಅವರನ್ನು ಹಿಂದಿಕ್ಕಿದ್ದ ಗೌತಮ್ ಅದಾನಿ, ಎರಡನೇ ಸ್ಥಾನದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಕೆಲ ಗಂಟೆಗಳ ಬಳಿಕ ಅರ್ನಾಲ್ಡ್ ಅವರ ಸಂಪತ್ತು ಏರಿಕೆಯಾಗಿದ್ದು, ಅವರು ಎರಡನೇ ಸ್ಥಾನಕ್ಕೆ ತಲುಪಿದರು.
ಹೀಗಾಗಿ ಮತ್ತೆ ಮೂರನೇ ಸ್ಥಾನಕ್ಕೆ ಗೌತಮ್ ಅದಾನಿ ತಲುಪಿದ್ದು, ಜೆಫ್ ಬೆಜೋಸ್ 4ನೇ ಸ್ಥಾನಕ್ಕೆ ಹೋಗಿದ್ದಾರೆ. ಗೌತಮ್ ಅದಾನಿ ಅವರ ಆಸ್ತಿ ಮೌಲ್ಯ 152.3 ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ.