ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (TCS) ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು. ಈ ಕಂಪನಿಯಲ್ಲಿ ಕೆಲಸ ಸಿಕ್ಕಿದ್ರೆ ಸಾಕು, ಅದೇ ಅದೃಷ್ಟ ಅಂತ ಅದೆಷ್ಟೋ ಜನ ಕನಸು ಕಾಣ್ತಿರ್ತಾರೆ. ಇದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಈ ಕಂಪನಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು.
ಐಟಿ ಉದ್ಯೋಗಿ ಆಗಿರೋ ತಿರುವಮಲೈ ಸೆಲ್ವನ್ 2015ರಲ್ಲಿ (TCS) ನಿಂದ ವಜಾಗೊಂಡಿದ್ದರು. ಕಂಪನಿಯ ಈ ನಿರ್ಧಾರಕ್ಕೆ ಒಪ್ಪಿಕೊಳ್ಳದ ತಿರುಮಲೈ ಸೆಲ್ವನ್ ಚೆನ್ನೈನ ಕಾರ್ಮಿಕ ನ್ಯಾಯಾಲಯಕ್ಕೆ ದೂರನ್ನ ಸಲ್ಲಿಸಿದ್ದರು.
8 ವರ್ಷಗಳ ಸೇವೆಯ ನಂತರ 2015 ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಇವರನ್ನ ವಜಾ ಮಾಡಲಾಗಿತ್ತು. ಐಟಿ ವೃತ್ತಿಪರ ತಿರುವಮಲೈ ಸೆಲ್ವನ್ ಅವರಿಗೆ ಚೆನ್ನೈನ ಕಾರ್ಮಿಕ ನ್ಯಾಯಾಲಯ ಇವರ ಪರವಾಗಿ ತೀರ್ಪನ್ನ ನೀಡಿದೆ. ನಂತರ ಅಂತಿಮವಾಗಿ ನ್ಯಾಯ ಪ್ರಕಟಿಸಿದೆ. ಸೆಲ್ವನ್ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಹಾಗೂ 7 ವರ್ಷಗಳ ಸಂಬಳ ಮತ್ತು ಓರ್ವ ಉದ್ಯೋಗಿಗೆ ಸಿಗಬೇಕಾಗಿರೋ ಎಲ್ಲ ಸವಲತ್ತುಗಳನ್ನ ಸಂಪೂರ್ಣವಾಗಿ ಕೊಡುವಂತೆ ನ್ಯಾಯಾಲಯ ಟಿಸಿಎಸ್ ಕಂಪನಿಗೆ ಹೇಳಿದೆ.
ಸೆಲ್ವನ್ ಅವರು ಕಳೆದ 7 ವರ್ಷಗಳಿಂದ ಸಾಫ್ಟ್ವೇರ್ ಕನ್ಸಲ್ಟೆನ್ಸಿ ಮತ್ತು ರಿಯಲ್ ಎಸ್ಟೇಟ್ ಬ್ರೋಕರೇಜ್ ಸೇರಿದಂತೆ ಕಂಪನಿಗೆ ಸಂಬಂಧ ಪಟ್ಟ ಅನೇಕ ಕೆಲಸಗಳನ್ನ ಮಾಡುತ್ತಿದ್ದರು.
ಸಹಾಯಕ ಇಂಜಿಯರ್ ಆಗಿ ಟಿಸಿಎಸ್ ಸೇರಿದ್ದ ಸೆಲ್ವನ್ ಅವರನ್ನು 2015ರಲ್ಲಿ ಸಾಮೂಹಿಕ ಹಿಂಬಡ್ತಿ ಆರೋಪದಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಸೇವಾ ಮುಂದುವರಿಕೆ ಕೋರಿ ಸೆಲ್ವನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಟಿಸಿಎಸ್ ದೂರು ದಾಖಲಿಸಿದಾತ ಕಾರ್ಮಿಕ ವರ್ಗಕ್ಕೆ ಸೇರಿಲ್ಲ ಅಂತ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದರು.
ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಿರುವಮಲೈ ಸೆಲ್ವನ್ ಕಳಪೆ ಕಾರ್ಯಕ್ಷಮತೆಯಿಂದಾಗಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕಂಪನಿಯ ಕಾನೂನು ಪ್ರತಿನಿಧಿ ನ್ಯಾಯಾಲಯದ ಮುಂದೆ ಹೇಳಿದ್ದರು.
ಫೋರಂ ಫಾರ್ ಐಟಿ ಎಂಪ್ಲಾಯೀಸ್ ( FITE), ಉದ್ಯೋಗಿಗಳ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ಇದು ಸೆಲ್ವನ್ ಅವರ ಸಮಸ್ಯೆಗಳಿಗೆ ಸ್ಪಂದಿಸಿತ್ತು. ನ್ಯಾಯಾಲಯದ ಹೋರಾಟಕ್ಕೆ ಬೆಂಬಲಿಸಿತ್ತು ಕೂಡಾ. ಇದೇ ಕಾರಣಕ್ಕೆ ಸೆಲ್ವನ್ 100ಕ್ಕೂ ಹೆಚ್ಚು ಬಾರಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಕೊನೆಗೆ ಈ ಜಯ ಸಿಕ್ಕಿದೆ.
ವಿಪ್ರೋ, ಟಿಸಿಎಸ್, ಇನ್ಫೋಸಿಸ್, ಎಚ್ಸಿಎಲ್ ಮತ್ತು ಅನೇಕ ಐಟಿ ಬಿಟಿ ಕಂಪನಿಗಳು ಸೇರಿ ಈ (FITE) ನಡೆಸುತ್ತಿದೆ. ಈ ಕುರಿತು FITE ಟ್ವಿಟ್ ಕೂಡಾ ಮಾಡಿದೆ.
`ನ್ಯಾಯ ಸಿಗುತ್ತೆ ಅನ್ನುವ ನಂಬಿಕೆ ಈಡೇರಿದೆ. ವಿನಾಕಾರಣ ನೌಕರಿಯಿಂದ ವಜಾ ಮಾಡುವವರಿಗೆ ಸರ್ಕಾರ ತಾಕೀತು ಮಾಡಿದೆ. ನ್ಯಾಯಕ್ಕಾಗಿ ಇಷ್ಟು ವರ್ಷಗಳ ಕಾಲ ಹೋರಾಡಿರೋ ಟಿಸಿಎಸ್ ಉದ್ಯೋಗಿಗೆ ಸೆಲ್ಯೂಟ್ ‘ ಎಂದಿದೆ.