ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ ಅಗತ್ಯವಿರುವ ಕೆಲ ವಸ್ತುಗಳಿದ್ದರೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ.
ಉದ್ಯೋಗಕ್ಕೆ ಹೋಗುವ ಮಹಿಳೆ ಪರ್ಸ್ ನಲ್ಲಿ ಬಿಬಿ ಕ್ರೀಂ ಇರಲಿ. ಈ ಕ್ರೀಂ ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಖದ ಗ್ಲೋ ಹೆಚ್ಚಿಸುತ್ತದೆ. ಹಾಗಾಗಿ ಟಿಶ್ಯುವಿನಲ್ಲಿ ಮುಖ ಸ್ವಚ್ಛಗೊಳಿಸಿಕೊಂಡು ಬಿಬಿ ಕ್ರೀಂ ಹಚ್ಚಿಕೊಳ್ಳಿ.
ಫೇಸ್ ಮಿಸ್ಟ್ ಅಥವಾ ರೋಸ್ ವಾಟರ್ ಸ್ಪ್ರೇ ಇಟ್ಟುಕೊಳ್ಳಿ. ಮೀಟಿಂಗ್ ಅಥವಾ ಕಾರ್ಯಕ್ರಮಕ್ಕೆ ಹೋಗುವ ಕೆಲ ನಿಮಿಷದ ಮೊದಲು ಇದನ್ನು ಮುಖಕ್ಕೆ ಸ್ಪ್ರೇ ಮಾಡಿ. ಇದು ಶುಷ್ಕತೆ ಹೋಗಲಾಡಿಸಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.
ಲಿಪ್ ಸ್ಟಿಕ್ ಹಚ್ಚಿಕೊಳ್ಳಲು ತುಂಬಾ ಸಮಯ ಹಿಡಿಯುತ್ತದೆ. ಹಾಗಾಗಿ ಲಿಪ್ ಸ್ಟಿಕ್ ಬದಲು ಲಿಪ್ ಬಾಮ್ ಇಟ್ಟುಕೊಳ್ಳಿ. ಇದು ತುಟಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಫಟಾಫಟ್ ರೆಡಿಯಾಗಲು ನೆರವಾಗುತ್ತದೆ.
ಐ ಲೈನರ್ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ತಕ್ಷಣ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇದು ಬೆಸ್ಟ್. ಹಾಗಾಗಿ ನಿಮ್ಮ ಪರ್ಸ್ ನಲ್ಲಿ ಸದಾ ಐ ಲೈನರ್ ಇಟ್ಟುಕೊಳ್ಳಿ.