ತೆಂಗಿನ ಎಣ್ಣೆ ಚರ್ಮಕ್ಕೆ, ಕೂದಲಿಗೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿಯೂ ಸೇವನೆ ಮಾಡ್ತೇವೆ. ಇದು ಆರೋಗ್ಯಕ್ಕೆ ಅತ್ಯುತ್ತಮ ಎಂದು ನಂಬಲಾಗಿದೆ. ತುಂಬಾ ಪ್ರಯೋಜನಕಾರಿ ಎಂದುಕೊಂಡಿರುವ ತೆಂಗಿನ ಎಣ್ಣೆಯಲ್ಲೂ ಚರ್ಮಕ್ಕೆ ಹಾನಿಪಡಿಸುವಂತಹ ಅಂಶವಿದೆ ಎಂದ್ರೆ ನಂಬಲೇಬೇಕು.
ತೆಂಗಿನ ಎಣ್ಣೆ ಮಾಯಿಶ್ಚರೈಸರ್ ಕೆಲಸ ಮಾಡುತ್ತದೆ. ಆದ್ರೆ ಎಲ್ಲ ರೀತಿಯ ಚರ್ಮಕ್ಕೂ ಇದು ಒಳ್ಳೆಯದಲ್ಲ. ಒಣ ಚರ್ಮದವರಿಗೆ ಇದು ಹೊರಗಿನಿಂದ ಪೋಷಕಾಂಶ ನೀಡುತ್ತದೆ. ಆದ್ರೆ ಒಳಗಿನಿಂದ ಮಾಯಿಶ್ಚರೈಸರ್ ಮಾಡುವುದಿಲ್ಲ.
ಆಯುರ್ವೇದದ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಉಷ್ಣತೆ ಹೆಚ್ಚಿರುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವವರು ಇದ್ರ ಸೇವನೆ ಮಾಡದಿರುವುದು ಒಳ್ಳೆಯದು.
ಮೊಡವೆ ಸಮಸ್ಯೆಯಿರುವವರು ಕೂಡ ತೆಂಗಿನ ಎಣ್ಣೆಯಿಂದ ದೂರವಿರುವುದು ಬೆಸ್ಟ್. ಇದು ಮೊಡವೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿರುತ್ತದೆ.
ತುಂಬಾ ಸೂಕ್ಷ್ಮ ಚರ್ಮದವರು ಮೊದಲು ತೆಂಗಿನ ಎಣ್ಣೆಯನ್ನು ಅಂಗೈಗೆ ಅಥವಾ ಕಿವಿ ಹಿಂದೆ ಹಚ್ಚಿ ನೋಡಿ. ಕೆಲವೊಮ್ಮೆ ತೆಂಗಿನ ಎಣ್ಣೆ ತುರಿಕೆಗೆ ಕಾರಣವಾಗುತ್ತದೆ. ತೆಂಗಿನ ಎಣ್ಣೆ ಚರ್ಮವನ್ನು ಮತ್ತಷ್ಟು ಶುಷ್ಕ ಹಾಗೂ ಒರಟು ಮಾಡುತ್ತದೆ.